ಕೊಲ್ಲಂ: ಕೇರಳದ ಕೊಲ್ಲಂ ನಲ್ಲಿ ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ(ಎನ್‌ಡಿಎಫ್‌ಬಿ) ಸಂಘಟನೆಯ ಉಗ್ರನನ್ನ ಬಂಧಿಸಲಾಗಿದ್ದು, ಒಂದು ವರ್ಷದಲ್ಲಿ ಇದು ಈಶಾನ್ಯ ರಾಜ್ಯದ ಉಗ್ರರನ್ನು ಬಂಧಿಸಿರುವ ನಾಲ್ಕನೇ ಪ್ರಕರಣವಾಗಿದೆ.
ಮಿಲಿಟರಿ ಗುಪ್ತಚರ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬೋಡೋಲ್ಯಾಂಡ್ ನ ಉಗ್ರನನ್ನು ಬಂಧಿಸಲಾಗಿದ್ದು, ಕೇರಳ ಪೊಲೀಸರು ರಾಜ್ಯಕ್ಕೆ ನುಸುಳುತ್ತಿರುವ ತೀವ್ರಗಾಮಿಗಳ ಬಗ್ಗೆ ಎಚ್ಚರಿಕೆ ತುರ್ತು ಅಗತ್ಯವಿದೆ. 2015 ರ ನವೆಂಬರ್ ನಲ್ಲಿ ಕ್ಯಾಲಿಕಟ್ ನಲ್ಲಿ ಇದೆ ಮಾದರಿಯಲ್ಲಿ ಈಶಾನ್ಯ ರಾಜ್ಯದ ಉಗ್ರನನ್ನು ಬಂಧಿಸಲಾಗಿತ್ತು.
ಕೆಲಸ ಹುಡುಕಿಕೊಂಡು ಬರುವವರ ಸೋಗಿನಲ್ಲಿ ಈಶಾನ್ಯ ರಾಜ್ಯದ ಉಗ್ರರು ಕೇರಳಕ್ಕೆ ನುಸುಳುತ್ತಿದ್ದು, ಒಂದು ವರ್ಷದಲ್ಲಿ ಈಶಾನ್ಯ ರಾಜ್ಯದ ಉಗ್ರರನ್ನು ಬಂಧಿಸಿರುವ ನಾಲ್ಕನೇ ಪ್ರಕರಣ ರಾಜ್ಯಕ್ಕೆ ಆಗಮಿಸಿರುವ ವಲಸಿಗರ ಮೇಲೆ ನಿಗಾವಹಿಸುವುದಕ್ಕೆ ಕೇರಳ ಪೊಲೀಸರಿಗೆ ಎಚ್ಚರಿಕೆ ಗಂಟೆಯಾಗಿದೆ.
ಕೊಲ್ಲಂ ನಲ್ಲಿ ಜೂ.23 ರಂದು ಬಂಧಿಸಲಾದ ಈಶಾನ್ಯ ರಾಜ್ಯದ ಉಗ್ರ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಮಿಲಿಟರಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಇದೆ ಮಾದರಿಯಲ್ಲಿ 2015 ರ ಫೆಬ್ರವರಿಯಲ್ಲಿ ಬಂಧಿಸಲಾಗಿದ್ದ ಶಂಕಿತ ಎನ್ ಡಿಎಫ್ ಬಿ ಸಂಘಟನೆಯ ತೀವ್ರಗಾಮಿಗಳು ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು, ನಿಖರ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದ ಮಿಲಿಟರಿ ಗುಪ್ತಚರ ಇಲಾಖೆ ಅಧಿಕಾರಿಗಳು ಅಸ್ಸಾಮ್ ಎನ್ ಡಿ ಎಫ್ ಎಂ ನ ಸಂಘಟನಾ ಕಾರ್ಯದರ್ಶಿ ಲಿದಿಯಾನ್ ಬಸುಮತಾರಿಯನ್ನು ಬಂಧಿಸಿದ್ದರು.
ಇಂತಹ ಪ್ರಕರಣಗಳು ಕೇರಳದಲ್ಲಿ ಮರುಕಳಿಸುತ್ತಿದ್ದು, ಕೇರಳಕ್ಕೆ ಕಾರ್ಮಿಕರ ಸೋಗಿನಲ್ಲಿ ಈಶಾನ್ಯ ರಾಜ್ಯದ ತೀವ್ರಗಾಮಿಗಳು ಪ್ರವೇಶಿಸುತ್ತಿದ್ದು, ಕೇರಳ ಪೊಲೀಸರಿಗೆ ಎಚ್ಚರಿಕೆ ಗಂಟೆಯಾಗಿದೆ.