ಸಾಂದರ್ಭಿಕ ಚಿತ್ರ 
ದೇಶ

ದಂಪತಿಗಳು ಸೌಹಾರ್ದಯುತವಾಗಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು: ಸುಪ್ರೀಂ ಕೋರ್ಟ್

ದೇಶದ ವಿದ್ಯಾವಂತ ದಂಪತಿಗಳಲ್ಲಿ ವಿಚ್ಛೇದನ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗುತ್ತಿರುವ ಬಗ್ಗೆ ತೀವ್ರ...

ನವದೆಹಲಿ: ದೇಶದ ವಿದ್ಯಾವಂತ ದಂಪತಿಗಳಲ್ಲಿ ವಿಚ್ಛೇದನ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಅಧಿಕವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ಪ್ರವೃತ್ತಿ ಕೊನೆಯಾಗಬೇಕು, ದಂಪತಿಗಳು ಸೌಹಾರ್ದಯುತವಾಗಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಸಪ್ರೆ ಮತ್ತು ಅಶೋಕ್ ಭೂಷಣ್ ಅವರನ್ನೊಳಗೊಂಡ ನ್ಯಾಯಾಂಗ ರಜೆ ಪೀಠ ದಂಪತಿಯ ವಿಚ್ಛೇದನ ಪ್ರಕರಣ ಕುರಿತು ವಿಚಾರಣೆ ನಡೆಸುವಾಗ ಈ ಸಂದೇಹ ವ್ಯಕ್ತಪಡಿಸಿದೆ. ವಿದ್ಯಾವಂತ ದಂಪತಿಗಳು ಸಣ್ಣಪುಟ್ಟ ವಿಷಯಗಳಿಗೆ ಏಕೆ ಜಗಳವಾಡುತ್ತಾರೆ? ವಿಚ್ಛೇದನ, ಕೋರ್ಟ್ ಎಂದು ಹೋಗುವ ಬದಲು ಗಂಡ ಹೆಂಡತಿ ಒಟ್ಟಿಗೆ ಕುಳಿತು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದು ಒಳಿತು ಎಂದು ಹೇಳಿದೆ.
ಗಂಡ ಹೆಂಡತಿಯ ಪರ ವಾದ ಮಂಡಿಸಲು ನ್ಯಾಯಾಲಯಕ್ಕೆ ಹಾಜರಾಗುವ ವಕೀಲರು ಇಬ್ಬರನ್ನೂ ಬೇರೆ ಮಾಡುವ ಬದಲು ಒಂದು ಮಾಡಲು ನೋಡಬೇಕು ಎಂದು ನ್ಯಾಯಾಧೀಶರು ಹೇಳಿದರು.
ಹತ್ತಾರು ವರ್ಷಗಳ ಹಿಂದೆ ಬೆರಳೆಣಿಕೆಯ ಗಂಡ-ಹೆಂಡಿರ ಜಗಳ ನ್ಯಾಯಾಲಯದವರೆಗೆ ಹೋಗುತ್ತಿತ್ತು. ಆದರೆ ಇತ್ತೀಚೆಗೆ ತಮ್ಮ ಹಕ್ಕುಗಳ ಅರಿವು, ಮಹಿಳಾ ಪರ ಕಾನೂನುಗಳು, ಒತ್ತಡದ ಜೀವನಶೈಲಿಗಳಿಂದಾಗಿ ನಗರಗಳ ಕೋರ್ಟ್ ಗಳಲ್ಲಿ ಅರ್ಧಕ್ಕೂ ಹೆಚ್ಚು ಕೇಸುಗಳು ವಿವಾಹಕ್ಕೆ ಸಂಬಂಧಪಟ್ಟದ್ದಾಗಿವೆ.
ಸುಪ್ರೀಂ ಕೋರ್ಟ್ ವಿವಾಹ ವಿಚ್ಛೇದನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಹೀಗೆ ಹೇಳುತ್ತಿರುವುದು ಇದು ಮೊದಲ ಸಲವೇನಲ್ಲ. ವಾರದ ಹಿಂದೆ ಇನ್ನೊಂದು ವಿವಾಹ ಕಲಹ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ರಜೆ ಇರುವುದು ಮನರಂಜನೆಗಾಗಿ. ವಿರಾಮದ ಸಂದರ್ಭಗಳಲ್ಲಿ ದಂಪತಿಗಳು ಒಟ್ಟಾಗಿ ಕೆಲ ಸಮಯವನ್ನು ಕಳೆಯಬೇಕು. ತನ್ನ ವಿಚ್ಛೇದನ ಪ್ರಕರಣವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ಮಹಿಳೆಯೊಬ್ಬರು ಮಾಡಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಹೇಳಿಕೆ ನೀಡಿದೆ. ಅಲ್ಲದೆ ಪರಸ್ಪರ ಸೌಹಾರ್ದಯುತವಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ಕೋರ್ಟ್ ಹೇಳಿದೆ.
ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದು, ವಿಭಕ್ತ ಕುಟುಂಬ, ಆಧುನಿಕ ಜೀವನಶೈಲಿ, ಮಹಿಳೆಯರಲ್ಲಿ ಆರ್ಥಿಕ ಮತ್ತು ಮಾನಸಿಕ ಸ್ವಾವಲಂಬನೆ ಹೆಚ್ಚಾಗುತ್ತಿರುವುದು, ತಡವಾಗಿ ಮದುವೆಯಾಗುವುದು, ಗಂಡ-ಹೆಂಡತಿಯಲ್ಲಿ ಹೊಂದಾಣಿಕೆ ಕೊರತೆ ಮೊದಲಾದ ಕಾರಣಗಳು ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಹೆಚ್ಚಾಗಲು ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೂ ಹೇಳಿತ್ತು.
ಇಂದು ದೇಶಾದ್ಯಂತ ನೂರಾರು ವಿಚ್ಛೇದನ ಕೇಸುಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗುತ್ತವೆ. ಗಂಡ ಹೊಂಡತಿ ಪರಸ್ಪರ ಹೊಂದಿಕೊಂಡು, ಒಬ್ಬರನ್ನೊಬ್ಬರು ಕ್ಷಮಿಸಿ ಬಾಳ್ವೆ ನಡೆಸುವುದು ಕಡಿಮೆಯಾಗುತ್ತಿರುವುದು ವಿಚ್ಛೇದನ ಹೆಚ್ಚಾಗಲು ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!