ಇಂಫಾಲ: ಹ್ಮಾರ್ ನ್ಯಾಷನಲ್ ಆರ್ಮಿ ಸಂಘಟನೆಯ ನಾಯಕ ಲಾಲ್ಥನ್ ಶಂಗ್ ಹ್ಮಾರ್ ನ್ನು ಮಣಿಪುರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮಣಿಪುರದ ಚುರಾಚಂದ್ಪುರ್ ನಲ್ಲಿ ಘಟನೆ ನಡೆದಿದ್ದು ಮಾಜಿ ಉಗ್ರನ ಮನೆಗೆ ನುಗ್ಗಿದ ಅನಾಮಿಕ ವ್ಯಕ್ತಿಗಳು ಲಾಲ್ಥನ್ ಶಂಗ್ ಹ್ಮಾರ್ ಮೇಲೆ ಹರಿತವಾದ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ನಂತರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿ ನಡೆಸಿದ ಬಳಿಕ ಅನಾಮಿಕ ದುಷ್ಕರ್ಮಿಗಳು ಹ್ಮಾರ್ ನಿವಾಸದಿಂದ ಪರಾರಿಯಾಗಿದ್ದಾರೆ ಈ ನಡುವೆ ಹ್ಮಾರ್ ನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಆತ ಬದುಕುಳಿಯಲಿಲ್ಲ. ಏ.21 ರಂದು ಪೀಪಲ್ಸ್ ರೆವೆಲ್ಯೂಷನರಿ ಪಕ್ಷದ ಮಾಜಿ ಅಧ್ಯಕ್ಷ ನಿಂಗೊಬಮ್ ನಬಚಂದ್ರ ಹಾಗೂ ಅವರ ಕಾರು ಚಾಲಕನನ್ನ ಹತ್ಯೆ ಮಾಡಲಾಗಿತ್ತು.