ಬಾಲಿವುಡ್ ನಟ ಸಲ್ಮಾನ್ ಖಾನ್(ಸಂಗ್ರಹ ಚಿತ್ರ)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ನ ಅದೃಷ್ಟ ಇತ್ತೀಚೆಗೆ ಚೆನ್ನಾಗಿರುವಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ಮಹಿಳೆಯರ ರೇಪ್ ಕುರಿತ ವಿಷಯವಾಗಿ ಹೇಳಿಕೆ ನೀಡಿ ಮಹಿಳೆಯರು ಸೇರಿದಂತೆ ಅನೇಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.
2002ರ ಗುದ್ದೋಡು( ಹಿಟ್ ಅಂಡ್ ರನ್ ಕೇಸಿ) ಪ್ರಕರಣದಲ್ಲಿ ಬಚಾವಾದೆ ಅನ್ನುವಷ್ಟರಲ್ಲಿ ಆ ಕೇಸಿನಿಂದ ಅಷ್ಟು ಬೇಗನೆ ಬಿಡುಗಡೆಯಾಗುವ ಲಕ್ಷಣ ಕಾಣುತ್ತಿಲ್ಲ. ಸಲ್ಮಾನ್ ಖಾನ್ ನನ್ನು ಖುಲಾಸೆಗೊಳಿಸಿ ಮುಂಬೈ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪುರಸ್ಕರಿಸಿದೆ.
ನ್ಯಾಯಾಧೀಶರಾದ ಜಗದೀಶ್ ಸಿಂಗ್ ಖೆಹರ್ ಮತ್ತು ಅರುಣ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ,ಕೇಸಿಗೆ ಸಂಬಂಧಪಟ್ಟಂತೆ ವಿಚಾರಣೆಯನ್ನು ತ್ವರಿತವಾಗಿ ಮುಗಿಸಲು ನಿರಾಕರಿಸಿದೆ.