ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗು 
ದೇಶ

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ 18 ತಿಂಗಳ ಮಗುವಿನ ತೂಕ 22 ಕೆಜಿ

ಹದಿನೆಂಟು ತಿಂಗಳ ಮಗುವೊಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಮಗುವಿನ ತೂಕ 22 ಕೆಜಿ ಇದೆ...

ಮುಂಬೈ: ಹದಿನೆಂಟು ತಿಂಗಳ ಮಗುವೊಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು ಮಗುವಿನ ತೂಕ 22 ಕೆಜಿ ಇದೆ.

ಶ್ರೀಜಿತ್ ಹಿಂಗಾನ್ಕರ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಪೋಷಕರು ಮಗುವನ್ನು ನಗರದ ಜಾಸ್ಪೊಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಇಂತಹ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಪ್ರಕರಣ ದೇಶದಲ್ಲೇ ಎರಡನೇಯದ್ದು, ಇಂತಹ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸದ್ಯ ಭಾರತದಲ್ಲಿ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

ಶ್ರೀಜಿತ್ ಹುಟ್ಟಿದಾಗ 2.5 ಕೆಜಿ ತೂಕವಿದ್ದ, ಆರು ತಿಂಗಳಿಗೆ 4 ಕೆಜಿಗೆ ಬೆಳೆದಿದ್ದಾನೆ. ನಂತರ 17 ಕೆಜಿ ಇದ್ದ ಶ್ರೀಜಿತ್ ಈಗ 22 ಕೆಜಿಗೆ ತೂಗುತ್ತಿದ್ದಾನೆ. ಅಸಾಧಾರಣವಾಗಿ ಬೆಳೆಯುತ್ತಿದ್ದ ಮಗುವನ್ನು ಗಮನಿಸಿದ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಪುಣೆಯ ಬೋಸರಿ ಗ್ರಾಮದಿಂದ ಮುಂಬೈಗೆ ಬಂದಿದ್ದಾರೆ. ಈ ವೇಳೆ ಮಾತನಾಡಿದ ತಾಯಿ ರುಪಾಲಿ ಹಿಂಗಾನ್ಕರ್ ಶ್ರೀಜಿತ್ ಪದೇ ಪದೇ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಸ್ವತಃ ಕುಳಿತುಕೊಳ್ಳಲು ಹಾಗೂ ನಿಲ್ಲಲು ಸಾಧ್ಯವಿಲ್ಲ. ಮಗನಿಗೆ ಹಸಿವಾದಾಗ ಆಹಾರ ನೀಡದೇ ಇದ್ದರೆ ಜೋರಾಗಿ ಅಳುತ್ತಿದ್ದ ಎಂದು ಹೇಳಿದ್ದಾರೆ.

ಶ್ರೀಜಿತ್ ಲೆಪ್ಟಿನ್ ಕಾಯಿಲೆಯಿಂದ ಬಳಲುತ್ತಿದ್ದು, ಇದು ವಂಶವಾಹಿಯಾಗಿ ಬರುತ್ತದೆ. ಸದ್ಯ ಭಾರತದಲ್ಲಿ ಇಂತಹ ಕಾಯಿಲೆಗೆ ಚಿಕಿತ್ಸೆ ಲಭ್ಯವಿಲ್ಲ ಎಂದು ಅಂತಃಸ್ರಾವಶಾಸ್ತ್ರಜ್ಞ ಮತ್ತು ಮಕ್ಕಳ ವೈದ್ಯ ಅಭಿಶೇಕ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ