ಸಾಂದರ್ಭಿಕ ಚಿತ್ರ 
ದೇಶ

ನಮಾಮಿ ಗಂಗೆ ಶುದ್ದೀಕರಣ ಯೋಜನೆಗೆ ಇಂದು ಚಾಲನೆ

ಸುಮಾರು 2ಸಾವಿರ ಕೋಟಿ ರೂ ವೆಚ್ಚದಲ್ಲಿ ಗಂಗಾ ನದಿಯನ್ನು ಶುದ್ಧೀಕರಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನವಾಮಿ ಗಂಗೆ ಯೋಜನೆಗೆ ಇಂದು ಚಾಲನೆ ...

ನವದೆಹಲಿ: ಸುಮಾರು 2ಸಾವಿರ ಕೋಟಿ ರೂ ವೆಚ್ಚದಲ್ಲಿ ಗಂಗಾ ನದಿಯನ್ನು ಶುದ್ಧೀಕರಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನವಾಮಿ ಗಂಗೆ ಯೋಜನೆಗೆ ಇಂದು ಚಾಲನೆ ಸಿಗಲಿದೆ. ನದಿ ಶುದ್ಧೀಕರಣಕ್ಕಾಗಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ ಹಾಗೂ ಅನಿಯಂತ್ರಿತ ನೀರಿನ ಹರಿವು ನಿಯಂತ್ರಣ ಸೇರಿದಂತೆ 300 ಯೋಜನೆಗಳು ‘ನಮಾಮಿ ಗಂಗೆ’ಯಲ್ಲಿ ಸೇರಿವೆ.

ಯೋಜನೆಯ ಮೊದಲ ಭಾಗವಾಗಿ ಗಂಗಾ ನದಿ ಹರಿಯುವ  ಐದು ರಾಜ್ಯಗಳ 104 ಸ್ಥಳಗಳಲ್ಲಿ ಏಕಕಾಲದಲ್ಲಿ ಸ್ಮಶಾನ ಹಾಗೂ ಚಿತಾಗಾರ ನಿರ್ಮಾಣ, ದುರಸ್ತಿ, ಸುಂದರ ನದಿ ತೀರ ನಿರ್ಮಾಣ ಹಾಗೂ ಕೊಳಚೆ ನೀರು ಸಂಸ್ಕರಣ ಘಟಕಗಳ ನಿರ್ಮಾಣ, ದುರಸ್ತಿ ಸೇರಿದಂತೆ ಇತರ ಅಭಿವೃದ್ಧಿ ಕೆಲಸ ಗಳನ್ನು ಆರಂಭಿಸಲಾಗುತ್ತದೆ.

ಗಂಗಾ ನದಿ ತಟದ 104 ಸ್ಥಳಗಳಲ್ಲಿ ಏಕಕಾಲಕ್ಕೆ ಯೋಜನೆ ಆರಂಭವಾಗಲಿದೆ. ಈ ಆಂದೋಲನಕ್ಕೆ 5 ವರ್ಷಗಳ ಅವಧಿಗೆ 20 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಮೀಸಲಿರಿಸಿದೆ. 2019ರೊಳಗೆ ಗಂಗೆಯನ್ನು ವಿಶ್ವದ ಟಾಪ್‌-10 ಸ್ವಚ್ಛ ನದಿ ಎಂದು ಘೋಷಿಸುವ ಇರಾದೆ ಮೋದಿ ಸರ್ಕಾರದ್ದು.

ಇದೇ ಮೊದಲ ಬಾರಿ ಇಷ್ಟೊಂದು ಸಂಪೂರ್ಣ ಪ್ರಮಾಣದಲ್ಲಿ ನದಿಯೊಂದನ್ನು ಶುದ್ಧೀಕರಿಸಲಾಗುತ್ತಿದೆ. ಅಕ್ಟೋಬರ್‌ 2016ರ ವೇಳೆಗೆ ಮೊದಲ ಹಂತ ಮುಗಿಯಲಿದೆ. 2ನೇ ಹಂತದ ಶುದ್ಧೀಕರಣಕ್ಕೆ 2 ವರ್ಷ ಹಿಡಿಯಲಿದೆ'.

ಗಂಗಾ ನದಿ ಧಾರ್ಮಿಕ ಮಹತ್ವ ಪಡೆದಿದ್ದು, ಜನರ ನಂಬಿಕೆಗೆ ಧಕ್ಕೆಯಾಗದಂತೆ ಯೋಜನೆ ಕೈಗೆತ್ತಿಕೊಳ್ಳಲಾಗು ವುದು. ವಿಶ್ವದಲ್ಲಿ ಲಭ್ಯವಿರುವ ಎಲ್ಲ ಉನ್ನತ ತಂತ್ರಜ್ಞಾನ ಬಳಸಿ ಶುದ್ಧೀಕರಣ ನಡೆಸಲಾಗುವುದು ಎಂದು ಸಚಿವ ಹೆದ್ದಾರಿ ಸಚಿವ  ನಿತಿನ್‌ ಗಡ್ಕರಿ ಹೇಳಿದ್ದಾರೆ.

ಕೇಂದ್ರದ ಸಚಿವರಾದ ನಿತಿನ್‌ ಗಡ್ಕರಿ, ಉಮಾಭಾರತಿ, ನರೇಂದ್ರ ತೋಮರ್‌, ಮಹೇಶ್‌ ಶರ್ಮಾ ಹಾಗೂ ನೂತನವಾಗಿ ನೇಮಕವಾಗಿರುವ ರಾಜ್ಯ ಜಲ ಸಂಪನ್ಮೂಲ ಸಚಿವ ವಿಜಯ್ ಗೋಯೆಲ್ ಹರಿದ್ವಾರದಲ್ಲಿ ಅಭಿವೃದ್ಧಿ ಕಾರ್ಯ ಗಳಿಗೆ ಚಾಲನೆ ನೀಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT