ಲಾಲು ಪ್ರಸಾದ್ ಯಾದವ್ 
ದೇಶ

ನಾನು ಯಾವ ಸೂಪರ್ ಸ್ಟಾರ್ ನಟನಿಗಿಂತ ಕಡಿಮೆ ಇಲ್ಲ: ಲಾಲು ಪ್ರಸಾದ್

ನಾನು ಯಾವ ಸೂಪರ್ ಸ್ಟಾರ್ ನಟನಿಗಿಂತ ಕಡಿಮೆ ಇಲ್ಲ ಎಂದು ರಾಷ್ಟ್ರೀಯ ಜನತಾದಳ(ಆರ್ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ...

ಪಾಟ್ನಾ: ನಾನು ಯಾವ ಸೂಪರ್ ಸ್ಟಾರ್ ನಟನಿಗಿಂತ ಕಡಿಮೆ ಇಲ್ಲ ಎಂದು ರಾಷ್ಟ್ರೀಯ ಜನತಾದಳ(ಆರ್ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.

ನಟ ಇರ್ಫಾನ್ ಅಭಿನಯದ ಮದಾರಿ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಾಲು ಪ್ರಸಾದ್ ಯಾದವ್ ಅವರು ಈ ವೇಳೆ ನಾನು ಸಹ ಯಾವ ನಟನಿಗಿಂತ ಕಡಿಮೆ ಇಲ್ಲ. ನನ್ನ ಜೀವನಾಧಾರಿತ ಚಿತ್ರವನ್ನು ತೆರೆಗೆ ತಂದರೆ ಅದರಲ್ಲಿ ನಾನೇ ಅಭಿನಯಿಸುತ್ತೇನೆ ಎಂದು ಹೇಳಿದ್ದಾರೆ.

ನನ್ನ ಜೀವನಾಧಾರಿತ ಚಿತ್ರವನ್ನು ಯಾರಾದರೂ ನಿರ್ಮಿಸುವುದಾದರೇ ಅದರಲ್ಲಿ ನಾನೇ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತೇನೆ. ಇನ್ನು ನಟಿಯ ಆಯ್ಕೆಯನ್ನು ಇರ್ಫಾನ್ ವಹಿಸುವುದಾಗಿ ಲಾಲು ಹೇಳಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಅವರು ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಸಿನಿಮಾ ಪ್ರಿಯರಾಗಿದ್ದು ಹಲವು ಚಿತ್ರಗಳನ್ನು ನೋಡಿದ್ದಾರಂತೆ. ಇನ್ನು ಸೂಪರ್ ಸ್ಟಾರ್ ದಿಲೀಪ್ ಕುಮಾರ್ ಅವರ ನೆಚ್ಚಿನ ನಟರಾಗಿದ್ದರಂತೆ.

ನಟ ಸುನೀಲ್ ಶೆಟ್ಟಿ ಅಭಿನಯದ ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಚಿತ್ರದಲ್ಲಿ ಲಾಲು ಪ್ರಸಾದ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ