ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಅಮರನಾಥ ಯಾತ್ರೆಯನ್ನು ಸ್ಧಗಿತಗೊಳಿಸಲಾಗಿದ್ದು, ಯಾತ್ರೆಗೆ ತೆರಳಿದ್ದ 50ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಮ್ಮು ಬೇಸ್ ಕ್ಯಾಂಪ್ ನಿಂದ ಹೊಸ ಯಾತ್ರಾರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ. ಹಾಗೂ ಇತರ ಪ್ರದೇಶಗಳಲ್ಲಿರುವ ಯಾತ್ರಿಗಳಿಗೆ ಬೇಸ್ ಕ್ಯಾಂಪ್ ನಲ್ಲೇ ಇರುವಂತೆ ಸೂಚಸಲಾಗಿದೆ. ಹೀಗಾಗಿ ಅಮರನಾಥ ಯಾತ್ರೆಗೆ ತೆರಳಿದ್ದ 50ಕ್ಕೂ ಹೆಚ್ಚು ಕನ್ನಡಿಗರು ಬಾಲ್ ತಾಲ್ ಕ್ಯಾಂಪ್ ನಲ್ಲಿ ಸಿಲುಕಿದ್ದಾರೆ.
ಬೇಸ್ ಕ್ಯಾಂಪ್ ನಲ್ಲಿ ಉಳಿದುಕೊಳ್ಳಲು ಅವಕಾಶ ದೊರೆತಿದೆ. ಕಳೆದ 3 ದಿನಗಳಿಂದ ಬೇಸ್ ಕ್ಯಾಂಪ್ ನಲ್ಲಿ ಆಶ್ರಯಪಡೆದಿದ್ದು, ಇಲ್ಲಿ ಔಷಧ, ಊಟ ಸಿಗದೆ ಪರದಾಡುವಂತಾಗಿದೆ ಎಂದು ಕನ್ನಡಿಗರೊಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಅಮರನಾಥ್, ವೈಷ್ಣೋದೇವಿ ಸೇರಿ ವಿವಿಧ ಕ್ಷೇತ್ರಗಳ ಯಾತ್ರೆಗೆ ರಾಜ್ಯದಿಂದ 50ಕ್ಕೂ ಹೆಚ್ಚು ಕನ್ನಡಿಗರು ತೆರಳಿದ್ದು ಜಮ್ಮ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಸಿಲುಕಿದ್ದಾರೆ.