ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿ ಹಸ್ತಮೈಥುನ ಫೋಟೋ ಯುವತಿ ಟ್ವೀಟ್: ವ್ಯಕ್ತಿ ಬಂಧನ

ಸಾರ್ವಜನಿಕ ಪ್ರದೇಶದಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ಫೋಟೋವನ್ನು ಯುವತಿಯೊಬ್ಬರು ಕ್ಲಿಕ್ಕಿಸಿ ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿದ್ದರಿಂದ ವ್ಯಕ್ತಿಯನ್ನು...

ಸಾರ್ವಜನಿಕ ಪ್ರದೇಶದಲ್ಲಿ ಹಸ್ತಮೈಥುನ ವ್ಯಕ್ತಿ ಚಿತ್ರ
Vishwanath S
Updated On : 15 Jul 2016, 4:20 am

ಮುಂಬೈ: ಸಾರ್ವಜನಿಕ ಪ್ರದೇಶದಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಯ ಫೋಟೋವನ್ನು ಯುವತಿಯೊಬ್ಬರು ಕ್ಲಿಕ್ಕಿಸಿ ಮುಂಬೈ ಪೊಲೀಸರಿಗೆ ಟ್ವೀಟ್ ಮಾಡಿದ್ದರಿಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮಂಗಳವಾರ ಯುವತಿಯರಿಬ್ಬರು ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಬೈಕ್ ಚಲಾಯಿಸುತ್ತಿದ್ದಂತೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ನೋಡಿ ಹಸ್ತಮೈಥುನಾ ಮಾಡಿಕೊಂಡಿದ್ದಾನೆ. ಕೂಡಲೆ ಓರ್ವ ಯುವತಿ ತಮ್ಮ ಮೊಬೈಲ್ ನಲ್ಲಿ ವ್ಯಕ್ತಿಯ ಹಸ್ತಮೈಥುನದ ಫೋಟೋವನ್ನು ಕ್ಲಿಕ್ಕಿಸಿ ನನ್ನ ಸ್ನೇಹಿತೆಯನ್ನು ಕಂಡ ತಕ್ಷಣ ವ್ಯಕ್ತಿ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಕೂಡಲೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು.

ವ್ಯಕ್ತಿಯ ಫೋಟೋವನ್ನು ಕಂಡ ತಕ್ಷಣ 15 ನಿಮಿಷದಲ್ಲಿ ಯುವತಿಯ ಫೋನಿಗೆ ಟ್ವೀಟ್ ಮಾಡಿ ಮಾಹಿತಿ ಸಂಗ್ರಹಿಸಿ ಕೇವಲ 3 ಗಂಟೆಯೊಳಗೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಯುವತಿ ವ್ಯಕ್ತಿಯ ಬೈಕ್ ನ ನಂಬರ್ ಪ್ಲೇಟ್ ಕ್ಲಿಕ್ಕಿಸಿದ್ದರಿಂದ ವ್ಯಕ್ತಿಯನ್ನು ಬಂಧಿಸಲು ಸಹಾಯಕವಾಯಿತು ಎಂದು ಯುವತಿಯರ ಸಮಯ ಪ್ರಜ್ಞೆಗೆ ಶಹಬ್ಬಾಸ್ ಗಿರಿ ಹೇಳಿದ್ದಾರೆ.

ಬಂಧಿತ ವ್ಯಕ್ತಿ ಬಾಂದ್ರಾ ಮೂಲದ 35 ವರ್ಷದ ರಾಯ್ಸ್ ಲಿಕಾಯತ್ ಖುರೇಶಿ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments