ದೇಶ

ಚೆಕ್ ಬೌನ್ಸ್ ಪ್ರಕರಣ: ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

Vishwanath S
ಮುಂಬೈ: ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದೇರಿಯ ಮೆಟ್ರೋಪಾಲಿಟನ್ ಕೋರ್ಟ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. 
ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಶರ್ ಏರ್ ಲೈನ್ಸ್ 100 ಕೋಟಿಯ ಎರಡು ಚೆಕ್ ನೀಡಿದ್ದು ಅವು ಬೌನ್ಸ್ ಆದ ಹಿನ್ನೆಲೆ ಪ್ರಾಧಿಕಾರ ಮೆಟ್ರೋಪಾಲಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸಿತ್ತು. 
ಕಳೆದ ಮೇ 7 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು ಜೂನ್ 16ರಂದು ನ್ಯಾಯಾಲಯಕ್ಕೆ ವಿಜಯ್ ಮಲ್ಯ ಹಾಜರಾಗಬೇಕೆಂದು ಆದೇಶಿಸಿತ್ತ. ಇಂದು ನ್ಯಾಯಾಲಯಕ್ಕೆ ಮಲ್ಯ ಹಾಜರಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ.
ಉದ್ದೇಶಿತ ಬ್ಯಾಂಕ್ ಸುಸ್ತಿದಾರ ಪ್ರಕರಣದಿಂದಾಗಿ ವಿಜಯ್ ಮಲ್ಯ ದೇಶ ಬಿಟ್ಟು ಲಂಡನ್ ನಲ್ಲಿ ನೆಲೆಯೂರಿದ್ದಾರೆ. 
SCROLL FOR NEXT