ಭೂಪೇಂದರ್ ಸಿಂಗ್ ಠಾಕೂರ್ ಮತ್ತು ರೈತರ ಆತ್ಮಹತ್ಯೆ (ಸಂಗ್ರಹ ಚಿತ್ರ) 
ದೇಶ

ರೈತರ ಸಾವಿಗೆ ದೆವ್ವ-ಭೂತಗಳು ಕಾರಣ: ಮಧ್ಯಪ್ರದೇಶ ಸರ್ಕಾರದ ಬೇಜವಾಬ್ದಾರಿ ಹೇಳಿಕೆ

ರೈತರ ಸರಣಿ ಸಾವಿಗೆ ಕಾರಣ ಸಾಲಬಾಧೆ ಮತ್ತು ಬೆಳೆ ನಾಶ ಕಾರಣ ಅಲ್ಲ ದೆವ್ವ-ಭೂತಗಳು ಕಾರಣ ಎಂದು ಮಧ್ಯ ಪ್ರದೇಶ ಸರ್ಕಾರ ಬೇಜವಾಬ್ದಾರಿ ಹೇಳಿಕೆ ನೀಡಿದೆ.

ನವದೆಹಲಿ: ರೈತರ ಸರಣಿ ಸಾವಿಗೆ ಕಾರಣ ಸಾಲಬಾಧೆ ಮತ್ತು ಬೆಳೆ ನಾಶ ಕಾರಣ ಅಲ್ಲ ದೆವ್ವ-ಭೂತಗಳು ಕಾರಣ ಎಂದು ಮಧ್ಯ ಪ್ರದೇಶ ಸರ್ಕಾರ ಬೇಜವಾಬ್ದಾರಿ ಹೇಳಿಕೆ ನೀಡಿದೆ.

ಮಧ್ಯ ಪ್ರದೇಶದ ಸೆಹೋರ್ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಳಿಂದ ಸುಮಾರು 400ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ನಿನ್ನೆ ಮಧ್ಯ ಪ್ರದೇಶ ಸದನದಲ್ಲಿ ನಡೆದ  ಕಲಾಪದಲ್ಲಿ ಕಾಂಗ್ರೆಸ್ ಶಾಸಕ ಶೈಲೈಂದರ್ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಸರ್ಕಾರ ನೀಡಿರುವ ಉತ್ತರ "ದೆವ್ವ".... ಹೌದು ಸೆಹೋರ್ ಜಿಲ್ಲೆಯಲ್ಲಿ ಕಳೆದ 4 ವರ್ಷಗಳಿಂದ ನಡೆದಿರುವ  ರೈತರ ಆತ್ಮಹತ್ಯೆಗೆ ದೆವ್ವ ಮತ್ತು ಭಾನಾಮತಿ ಕಾಟವೇ ಕಾರಣ ಎಂದು ಸರ್ಕಾರ ಸದನಕ್ಕೆ ಲಿಖಿತ ಉತ್ತರ ನೀಡಿದೆ.

ಸೆಹೋರ್ ಜಿಲ್ಲೆಯಲ್ಲಿ ನಡೆದ 418 ರೈತ ಆತ್ಮಹತ್ಯೆ ಪ್ರಕರಣಗಳ ಪೈಕಿ 117 ಆತ್ಮಹತ್ಯೆ ಪ್ರಕರಣಗಳು ದೆವ್ವ-ಭೂತ ಮತ್ತು ಭಾನಾಮತಿ ಕಾರಣ ಎಂದು ಮಧ್ಯ ಪ್ರದೇಶದ ಗೃಹ ಸಚಿವ  ಭೂಪೇಂದರ್ ಸಿಂಗ್ ಠಾಕೂರ್ ಉತ್ತರಿಸಿದ್ದಾರೆ. ಗೃಹ ಸಚಿವ ಉತ್ತರ ನೀಡುತ್ತಿದ್ದಂತೆಯೇ ಇಡೀ ಸದನವೇ ಒಂದು ಕ್ಷಣ ಅವಾಕ್ಕಾಗಿ ಹೋಯಿತು. ಬಳಿಕ ಸಾವರಿಸಿಕೊಂಡ ಸದಸ್ಯರು ಈ ಬಗ್ಗೆ  ಗೃಹ ಸಚಿವರು ಹೆಚ್ಚಿನ ಮಾಹಿತಿಗೆ ಆಗ್ರಹಿಸಿದರು.

ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡದ ಗೃಹ ಸಚಿವ ಭೂಪೇಂದರ್ ಸಿಂಗ್ ಠಾಕೂರ್ ಅಧಿಕಾರಿಗಳಿಂದ ಮಾಹಿತಿ ಪಡೆದು ಉತ್ತರಿಸುತ್ತೇನೆ ಎಂದು ಜಾರಿಕೊಂಡರು.

ಇನ್ನು ಭೂಪೇಂದರ್ ಸಿಂಗ್ ಠಾಕೂರ್ ಅವರ ಉತ್ತರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಕಾಂಗ್ರೆಸ್ ಸದಸ್ಯ ಪಾಟೀಲ್ ಅವರು, ಅತ್ತ ಪ್ರಧಾನಿ ಮೋದಿ ಡಿಜಿಟಲ್ ಇಂಡಿಯಾ ಮತ್ತು ಮೇಕ್  ಇನ್ ಇಂಡಿಯಾದ ಕನಸು ತೋರಿಸುತ್ತಿದ್ದಾರೆ. ಇತ್ತ ಅವರದ್ದೇ ಮಧ್ಯ ಪ್ರದೇಶ ಸರ್ಕಾರ ರೈತರ ಸಾವಿಗೆ ದೆವ್ವ-ಭೂತದ ಕಥೆ ಕಟ್ಟುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ ರೈತರ ಸಾವಿಗೆ  ಸರ್ಕಾರವೇ ನೈತಿಕ ಹೊಣೆ ಹೊತ್ತು ರೈತರಿಗೆ ಪರಿಹಾರಧನ ನೀಡಬೇಕು ಎಂದು ಹೇಳಿದ್ದಾರೆ.

ಒಟ್ಟಾರೆ ಮಧ್ಯ ಪ್ರದೇಶ ಸರ್ಕಾರದ ಈ ಹೇಳಿಕೆ ಇದೀಗ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ಜಬಾಬ್ದಾರಿಯುತ ಸ್ಥಾನದಲ್ಲಿರುವ ಭೂಪೇಂದರ್ ಸಿಂಗ್ ಠಾಕೂರ್ ಅವರ ಈ ಹೇಳಿಕೆಗೆ  ನಗಬೇಕೋ ಅಥವಾ ಅಳಬೇಕೋ ತಿಳಿಯುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?