ದೇಶ

ಬಿಹಾರದ ನಳಂದಾದಲ್ಲಿ ಹಾರಾಡಿದ ಪಾಕ್ ಧ್ವಜ!

Srinivas Rao BV

ನಳಂದಾ: ಬಿಹಾರದ ನಳಂದಾ ಜಿಲ್ಲೆಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.  ಕಟ್ಟಡವೊಂದರ ಮೇಲೆ ವ್ಯಕ್ತಿಯೊಬ್ಬ ಪಾಕಿಸ್ತಾನದ ಧ್ವಜ ಹಾರಿಸಿದ್ದು ಈ ಬಗ್ಗೆ ಸ್ಥಳೀಯರು ದೂರು ನೀಡಿದ ಬಳಿಕ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಅನ್ವರುಲ್ ಹಕ್ ಎಂಬ ವ್ಯಕ್ತಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದು ಎಂದು ಶಂಕಿಸಲಾಗಿದ್ದು,  ಪೊಲೀಸರು ಈತನಿಗಾಗಿ ಹುಡುಕಾಟ ಪ್ರಾರಂಭ ಮಾಡಿದ್ದಾರೆ. ಸ್ಥಳೀಯರು ದೂರು ನೀಡಿದ ಬಳಿಕ ಎಚ್ಚೆತ್ತಿರುವ ಜಿಲ್ಲಾಡಳಿತ ಕಟ್ಟಡದ ಮೇಲಿದ್ದ ಧ್ವಜವನ್ನು ತೆರವುಗೊಳಿಸಿದ್ದಾರೆ.

SCROLL FOR NEXT