ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ ಹೋರಾಟಗಾರರಾದ ಚಂದ್ರಶೇಖರ್ ಆಜಾದ್ ಮತ್ತು ಬಾಲಗಂಗಾಧರ್ ತಿಲಕ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ನಮನ ಸಲ್ಲಿಸಿದ್ದಾರೆ.
ನರೇಂದ್ರ ಮೋದಿ ಅವರು ತಮ್ಮ ಟ್ವೀಟರ್ ನಲ್ಲಿ 1906ರ ಜುಲೈ 23 ಬಾವ್ರಾ ಗ್ರಾಮದಲ್ಲಿ ಜನಿಸಿದ್ದ ಚಂದ್ರಶೇಕರ ಆಜಾದ್ ಅವರು ದೇಶಕ್ಕಾಗಿ ಹೋರಾಡಿ ತಮ್ಮ ಶೌರ್ಯ ತೋರಿಸುವ ಮೂಲಕ ಅಸಂಖ್ಯಾತ ಭಾರತೀಯರ ಮನಗೆದ್ದಿದ್ದು ಅವರಿಗೆ ನಾನು ನಮನ ಸಲ್ಲಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಲೋಕಮಾನ್ಯ ತಿಲಕ್ ಎಂದೇ ಪ್ರಸಿದ್ಧಿ ಪಡೆದಿದ್ದ ಬಾಲಗಂಗಾದರ ತಿಲಕ್ ಅವರು ಭಾರತದ ಇತಿಹಾಸ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಹಲವಾರು ಭಾರತೀಯರಿಗೆ ತಮ್ಮ ದೇಶಕ್ಕಾಗಿ ಹೋರಾಡಲು ಸ್ಫೂರ್ತಿಯಾಗಿದ್ದರು ಎಂದು ಮೋದಿ ಅವರು ಇನ್ನೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.