ಸಾಂದರ್ಭಿಕ ಚಿತ್ರ 
ದೇಶ

ರಾಜರ ಜೊತೆ ರಾಜರ ರೀತಿಯಲ್ಲಿ ಮಹಾರಾಜ ಎಕ್ಸ್ ಪ್ರೆಸ್ ನಲ್ಲಿ ಸಂಚರಿಸಲು ಸುವರ್ಣಾವಕಾಶ

ಭಾರತದ ಹಿಂದಿನ ಮಹಾರಾಜರುಗಳ ಖಾಸಗಿ ಕೊಠಡಿಯಿಂದ ಪ್ರೇರೇಪಿತಗೊಂಡು ಮಹಾರಾಜ ಎಕ್ಸ್ ಪ್ರೆಸ್ ರೈಲು ತನ್ನ...

ನವದೆಹಲಿ: ಭಾರತದ ಹಿಂದಿನ ಮಹಾರಾಜರುಗಳ ಖಾಸಗಿ ಕೊಠಡಿಯಿಂದ ಪ್ರೇರೇಪಿತಗೊಂಡು ಮಹಾರಾಜ ಎಕ್ಸ್ ಪ್ರೆಸ್ ರೈಲು ತನ್ನ ಪ್ರಯಾಣಿಕರಿಗೆ ಮಹಾರಾಜರ ಅನುಭವವನ್ನು ನೀಡಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಭಾರತೀಯ ರೈಲು ಮತ್ತು ಪ್ರವಾಸೋದ್ಯಮ ನಿಗಮ ಭಾರತದ ಮಹಾರಾಜರುಗಳ ಪಟ್ಟಿ ಮಾಡಿ ಅವರನ್ನು ರೈಲಿನಲ್ಲಿ ಪ್ರಯಾಣಿಸುವಂತೆ ಆಹ್ವಾನಿಸಿ ಅವರ ಜೊತೆ ಪ್ರಯಾಣಿಕರಿಗೆ ಪ್ರಯಾಣಿಸಲು ವ್ಯವಸ್ಥೆ ಮಾಡಲಿದೆ. ಈ ಪ್ರಯಾಣ ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿದ್ದು, ಅನೇಕ ಪ್ರಯಾಣಿಕರನ್ನು ಆಕರ್ಷಿಸಲಿದೆ.
ಮಹಾರಾಜರುಗಳ ಪಟ್ಟಿಯಲ್ಲಿ ಅರವಿಂದ್ ಸಿಂಗ್ ಮೇವರ್, ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಕೋಟ್ ನ ಯುವರಾಜ ಮಂದತಸಿನ್ಹ ಜಡೇಜಾ, ಬಿಕನೇರ್ ನ ರಾಣಿ ರಾಜ್ಯಶ್ರೀ ಕುಮಾರಿ, ಜೋಧಪುರದ 2ನೇ ಗಜ್ ಸಿಂಗ್ ಮತ್ತು ಜೈಪುರದ ಅರಮನೆಯ ಪದ್ಮನಾಭ ಸಿಂಗ್ ಮೊದಲಾದವರಿದ್ದಾರೆ. ಮಹಾರಾಜ ಎಕ್ಸ್ ಪ್ರೆಸ್ ನಲ್ಲಿ ಮಹಾರಾಜರ ಜೊತೆ ಪ್ರಯಾಣಿಸುವ ಅವಕಾಶವನ್ನು ಜನರಿಗೆ ನೀಡುವ ಮೂಲಕ ಅವರಿಗೊಂದು ಸುವರ್ಣಾವಕಾಶವನ್ನು ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲಿನಲ್ಲಿ ಪ್ರಯಾಣಿಕರಿಗೆ ಮಹಾರಾಜರ ಜೊತೆ ಮಾತುಕತೆ ನಡೆಸುವ ಮತ್ತು ಚಹಾ ಕೂಟ ಮತ್ತು ಭೋಜನವನ್ನು ಕೂಡ ಏರ್ಪಡಿಸಲಾಗುತ್ತಿದೆ. ಆಯಾ ಮಹಾರಾಜರ ಜೀವನದ ಘಟನೆಗಳನ್ನು ಕೂಡ ವಿವರಿಸಲಾಗುತ್ತದೆ. ಮಹಾರಾಜ ಎಕ್ಸ್ ಪ್ರೆಸ್ ನಲ್ಲಿ ಮುಖ್ಯವಾಗಿ ಅನಿವಾಸಿ ಭಾರತೀಯರು ಮತ್ತು ವಿದೇಶಿಗರು ಪ್ರಯಾಣಿಸುತ್ತಾರೆ. ಅವರು ಮಹಾರಾಜ ಎಕ್ಸ್ ಪ್ರೆಸ್ ನಲ್ಲಿ ಐಷಾರಾಮಿಯನ್ನು ಬಯಸುತ್ತಾರೆ. 
ಮಹಾರಾಜ ಎಕ್ಸ್ ಪ್ರೆಸ್ ನಲ್ಲಿ 14 ಅತಿಥಿ ಬೋಗಿಗಳಿವೆ. ಪ್ರತಿಯೊಂದು ಬೋಗಿಗೂ ಒಂದೊಂದು ಬೆಲೆಬಾಳುವ ಕಲ್ಲಿನ ಹೆಸರಿನಿಂದ ಕರೆಯಲಾಗುತ್ತದೆ. ರೈಲಿನಲ್ಲಿ ಪ್ರೆಸಿಡೆನ್ಷಿಯಲ್ ಸೂಟ್, ಸೂಟ್, ಜೂನಿಯರ್ ಸೂಟ್ ಮತ್ತು ಡಿಲಕ್ಸ್ ಕ್ಯಾಬಿನ್ ಗಳಿವೆ.
ಈ ರೈಲಿಗೆ ಚಾಲನೆ ಸಿಕ್ಕಿದ್ದು 2010ರಲ್ಲಿ. ಭಾರತದ ಪ್ರಮುಖ ತಾಣಗಳನ್ನು, ಸಂಸ್ಕೃತಿ, ಸಂಪ್ರದಾಯಗಳನ್ನು ಜನರಿಗೆ ಪರಿಚಯಿಸುವುದು ರೈಲ್ವೆ ಇಲಾಖೆ ರೈಲನ್ನು ಆರಂಭಿಸಿರುವುದರ ಉದ್ದೇಶ.
ಮಹಾರಾಜರ ಜೊತೆ ಪ್ರಯಾಣಿಸಬೇಕೆಂದರೆ ನೀವು ದುಬಾರಿ ಬೆಲೆ ತೆರಲೇಬೇಕು. ಎಂಟು ರಾತ್ರಿ-ಏಳು ಹಗಲುಗಳ ಪ್ರಯಾಣಕ್ಕೆ ಡಿಲಕ್ಸ್ ಕ್ಯಾಬಿನ್ ಗೆ 4.6 ಲಕ್ಷ ರೂಪಾಯಿ, ಜೂನಿಯರ್ ಸೂಟ್ ಗೆ 6.6 ಲಕ್ಷ, ಸೂಟ್ ಗೆ 9.2 ಲಕ್ಷ ಮತ್ತು ಪ್ರೆಸಿಡೆನ್ಷಿಯಲ್ ಸೂಟ್ ಗೆ 16 ಲಕ್ಷ ರೂಪಾಯಿ ಬೆಲೆ ತೆರಬೇಕು. ಮಯೂರ್ ಮಹಲ್ ಮತ್ತು ರಂಗ್ ಮಹಲ್ ರೆಸ್ಟೋರೆಂಟ್ ಗಳಿಗಳಿಂದ ತಿಂಡಿ-ತಿನಿಸುಗಳು ಪೂರೈಕೆಯಾಗಲಿವೆ. ಬಾರ್ ಗಳು ಎಲ್ಲಾ ತರಹದ ಲಿಕ್ಕರ್ ಗಳನ್ನು ಒದಗಿಸುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

ಯೋಗೀಶ್ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್ ಶಾಸಕ ವಿನಯ್‌ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್‌; ಅ.27ಕ್ಕೆ ವಿಚಾರಣೆ ಮುಂದೂಡಿಕೆ