ನವದೆಹಲಿ: ದೇಶದ ಅತಿ ಸ್ವಚ್ಛ ರೈಲು ನಿಲ್ದಾಣಗಳಲ್ಲಿ ಕರ್ನಾಟಕದ ಯಾವೊಂದು ರೈಲು ನಿಲ್ದಾಣದ ಹೆಸರಿಲ್ಲ. ಆದರೆ ಅತಿ ಕೊಳಕು ರೈಲು ನಿಲ್ದಾಣಗಳ ಪಟ್ಟಿಯಲ್ಲಿ ರಾಯಚೂರು ನಾಲ್ಕನೇ ಸ್ಥಾನದಲ್ಲಿದೆ.
ರೈಲ್ವೆ ಸಚಿವಾಲಯವು ದೇಶದ 407 ಪ್ರಮುಖ ರೈಲು ನಿಲ್ದಾಣಗಳಲ್ಲಿ ನಡೆಸಿದ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಅತಿ ಕೊಳಕು ನಿಲ್ದಾಣಗಳನ್ನು ಹೊಂದಿರುವ ಕುಖ್ಯಾತಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಹೊಂದಿವೆ. ಇನ್ನು ದೇಶದ ಅತಿ ಸ್ವಚ್ಛ ರೈಲು ನಿಲ್ದಾಣಗಳನ್ನು ಹೊಂದಿರುವ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಗಿದೆ.
ನಿಲ್ದಾಣಗಳಲ್ಲಿನ ಸ್ವಚ್ಛತೆಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ 40 ವಿವಿಧ ಅಂಶಗಳ ಕುರಿತು ಪ್ರಯಾಣಿಕರು ಅಂಕಗಳನ್ನು ನೀಡಿದ್ದರು. ನಿಲ್ದಾಣಗಳಲ್ಲಿ ಕಸದಬುಟ್ಟಿಯ ಕೊರತೆ ಮತ್ತು ಗಲೀಜಾದ ಪ್ಲಾಟ್ ಫಾರಂಗಳ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10 ಸ್ವಚ್ಛ ನಿಲ್ದಾಣಗಳು:
ಬಿಯಾಸ್(ಪಂಜಾಬ್), ಗಾಂಧಿಧಾಮ(ಗುಜರಾತ್), ವಾಸ್ಕೊ ಡಿ ಗಾಮ(ಗೋವಾ), ಜಾಮ್ನಗರ್(ಗುಜರಾತ್), ಕುಂಭಕೋಣಂ(ತಮಿಳುನಾಡು), ಸೂರತ್(ಗುಜರಾತ್), ನಾಸಿಕ್ ರೋಡ್(ಮಹಾರಾಷ್ಟ್ರ), ರಾಜ್ ಕೋಟ್(ಗುಜರಾತ್), ಸೇಲಂ(ತಮಿಳುನಾಡು), ಅಂಕ್ಲೇಶ್ವರ್(ಗುಜರಾತ್).
10 ಕೊಳಕು ನಿಲ್ದಾಣಗಳು
ಮಧುಬನಿ(ಬಿಹಾರ), ಬಲ್ಲಿಯಾ(ಉತ್ತರಪ್ರದೇಶ), ಭಕ್ತಿಯಾರ್ ಪುರ್(ಬಿಹಾರ), ರಾಯಚೂರು(ಕರ್ನಾಟಕ), ಶಹಗಂಜ್(ಉತ್ತರಪ್ರದೇಶ), ಜಾಂಘೈ(ಉತ್ತರಪ್ರದೇಶ), ಅನುಗ್ರಹ ನಾರಾಯಣ್(ಬಿಹಾರ), ಸಗೌಲಿ(ಬಿಹಾರ), ಅರಾ(ಬಿಹಾರ), ಪ್ರತಾಪಗಡ(ಉತ್ತರಪ್ರದೇಶ).