ದೇಶ

ಮುಂದಿನ ವಾರ ಸಾರ್ಕ್ ಸಭೆಯಲ್ಲಿ ಭಾಗವಹಿಸಲು ಗೃಹ ಸಚಿವ ರಾಜನಾಥ್ ಸಿಂಗ್ ಇಸ್ಲಾಮಾಬಾದ್ ಗೆ ಪಯಣ

Sumana Upadhyaya
ನವದೆಹಲಿ: ಬುರ್ಹಾನ್ ವಾನಿಯ ಹತ್ಯೆಯ ನಂತರ ಕಾಶ್ಮೀರದಲ್ಲಿ ಉಲ್ಬಣಿಸಿರುವ ಹಿಂಸಾಚಾರದ ನಂತರ ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆಗಸ್ಟ್ 3 ಮತ್ತು 4ರಂದು ಇಸ್ಲಾಮಾಬಾದಿಗೆ ತೆರಳಲಿದ್ದಾರೆ. 
ಈ ಸಂದರ್ಭದಲ್ಲಿ ಅವರು ಎರಡೂ ದೇಶಗಳ ಗಡಿಯಲ್ಲಿ ಭಯೋತ್ಪಾದಕರ ಚಟುವಟಿಕೆ ಕುರಿತ ವಿಷಯವನ್ನು ಕೈಗೆತ್ತಿಕೊಳ್ಳಲಿದ್ದಾರೆ. 
ಭಯೋತ್ಪಾದನೆ ಎಲ್ಲಾ ರಾಷ್ಟ್ರಗಳಿಗೂ ಸವಾಲಾಗಿದ್ದು, ಮಾನವನ ಸೌಹಾರ್ದತೆಗೆ ಧಕ್ಕೆಯನ್ನುಂಟುಮಾಡುತ್ತದೆ.ಅದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾರ್ಕ್ ದೇಶಗಳ ಗೃಹ ಸಚಿವರು ಪ್ರತಿವರ್ಷ ಸಭೆ ಸೇರಿ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಢಾಕಾದಲ್ಲಿ 2005ರಲ್ಲಿ ನಡೆದ 13ನೇ ಸಾರ್ಕ್ ಸಮಿತ್ ನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಇದರ ಮೊದಲ ಸಭೆ 2006ರಲ್ಲಿ ಢಾಕಾದಲ್ಲಿ ಮೇ 11ರಂದು, 2007ರಲ್ಲಿ ದೆಹಲಿಯಲ್ಲಿ ನಡೆದಿತ್ತು.
ಬುರ್ಹಾನ್ ವಾನಿಯನ್ನು ಹುತಾತ್ಮ ಎಂದು ಹೊಗಳಿರುವ ಪಾಕಿಸ್ತಾನ ಕಾಶ್ಮೀರ ಕಣಿವೆಯಲ್ಲಿ ಭಾರತ ಹೆಚ್ಚಿನ ಪಡೆಯನ್ನು ಯುದ್ಧಕ್ಕೆ ಬಳಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆಪಾದಿಸಿದಿತ್ತು.
ಇದು ಇತ್ತೀಚಿನ ತಿಂಗಳಲ್ಲಿ ಪಾಕಿಸ್ತಾನ ನೀಡಿದ ಕಠೋರ ಹೇಳಿಕೆಯಾಗಿದ್ದು, ಇದಕ್ಕೆ ಕಳೆದ ಶನಿವಾರ ಪ್ರತಿಕ್ರಿಯಿಸಿದ್ದ ಭಾರತ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರನ್ನು ಉದ್ದೇಶಿಸಿ ಕಾಶ್ಮೀರ ಪಾಕಿಸ್ತಾನಕ್ಕೆ ಸೇರುವ ನಿಮ್ಮ ಕನಸು ನನಸಾಗುವುದಿಲ್ಲ ಎಂದು ಹೇಳಿತ್ತು. ಪಾಕಿಸ್ತಾನ ಯಾವುದೇ ಮುಜುಗರವಿಲ್ಲದೆ ಭಯೋತ್ಪಾದನೆಯನ್ನು ಅಪ್ಪಿಕೊಳ್ಳುತ್ತಿದೆ ಎಂದು ಹೇಳಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಪ್ರತಿಕ್ರಿಯಿಸಿದ್ದರು.
SCROLL FOR NEXT