ದೇಶ

ಆಗಸ್ಟ್ ವೇತನದ ಜೊತೆಗೆ ಕೇಂದ್ರ ನೌಕರರಿಗೆ ಬಾಕಿ ಪಾವತಿ

Shilpa D

ನವದೆಹಲಿ: 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಬಾಕಿಯನ್ನು 2016ರ ಆಗಸ್ಟ್ ತಿಂಗಳ ವೇತನದ ಜೊತೆಗೆ ಒಂದೇ ಕಂತಿನಲ್ಲಿ ನಗದು ರೂಪದಲ್ಲಿ ಪಾವತಿಸಲಾಗುತ್ತದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ವೇತನ ಬಾಕಿ ವಿತರಣೆಯನ್ನು ತ್ವರಿತಗೊಳಿಸುವ ಸಲುವಾಗಿ ಪರಿಷ್ಕೃತ ವೇತನಕ್ಕೆ ನಿಗದಿ ಪಡಿಸಿದ ತೆರಿಗೆ ದರವನ್ನು ಪೂರ್ವ ವಿಮರ್ಶೆ ಮಾಡದೆಯೇ ಬಾಕಿಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಆದರೆ ಈ ಅವಕಾಶ ಸೇವೆಯಿಂದ ಬಿಡುಗಡೆ ಹೊಂದಿದ ಸರ್ಕಾರಿ ನೌಕರರಿಗೆ ಲಭಿಸುವುದಿಲ್ಲ ಎಂದು ಮೂಲಗಳು ಹೇಳಿವೆ. ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸಿನಂತೆ ಮೂಲ ವೇತನ ಕನಿಷ್ಠ 18 ಸಾವಿರದಿಂದ ಗರಿಷ್ಠ 2.5ಲಕ್ಷದವರೆಗೆ ವೇತನ ಪಡೆಯಲಿದ್ದಾರೆ. ಇದರಿಂದ ಸರ್ಕಾರಕ್ಕೆ ಅಂದಾಜು 1.02 ಲಕ್ಷ ಕೋಟಿ ರುಪಾಯಿ ಹೊರೆಯಾಗಲಿದೆ.

SCROLL FOR NEXT