ಭುವನೇಶ್ವರ್: ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪ ಮೇಲೆ ಒಡಿಸ್ಸಾದ ಇಬ್ಬರು ಸಚಿವರು ಹಾಗೂ ಒಬ್ಬ ಶಾಸಕ ಸೇರಿ ಒಟ್ಟು ಐವರ ವಿರುದ್ಧ ಎಫ್ ಐ ಐರ್ ದಾಖಲಾಗಿದೆ.
ಒಡಿಸ್ಸಾದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಸಂಜಯ್ ದಸ್ ಬುರ್ಮಾ ಹಾಗೂ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಪುಷ್ಪೇಂದ್ರ ಸಿಂಗ್ದೋ ಮತ್ತು ಬಿಜೆಡಿ ಶಾಸಕ ಪ್ರಶಾಂತ್ ಕುಮಾರ್ ಜಾದವ್ ವಿರುದ್ಧ ಬಿಜೆಪಿ ಯುವ ಘಟಕ ದೂರು ನೀಡಿದ್ದು ಈ ಸಂಬಂಧ ಎಫ್ ಐ ಆರ್ ದಾಖಲಾಗಿದೆ.
ಭೋಧ್ ಜಿಲ್ಲೆಯ ಮನಮಂಡಾ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಛತ್ತೀಸ್ ಗಡ ಸರ್ಕಾರ ನಿರ್ಮಿಸಲು ಹೊರಟಿರುವ ಮಹಾನದಿ ಮೇಲ್ದಂಡೆ ಯೋಜನೆ ವಿರೋಧಿಸಿ ಬೋಧ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಚಿವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಬಿಜೆಪಿ ಯ ಕೆಲ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದರು. ಈ ವೇಳೆ ಬಿಜೆಡಿ ಬೆಂಬಲಿಗರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರ ಮುಂದೆಯೇ ಥಳಿಸಿದ್ದರು ಎಂದು ಮೂಲಗಳು ತಿಳಿಸಿವೆ.