ಹುಲಿ 
ದೇಶ

ಪ್ರವಾಸಿಗರ ಮೆಚ್ಚುಗೆ ಗಳಿಸಿದ್ದ 'ಜೈ' ಹುಲಿ ಕಳೆದ 3 ತಿಂಗಳಿನಿಂದ ನಾಪತ್ತೆ

ದೇಶದ ಖ್ಯಾತ ಹುಲಿ ಜೈ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದು ಯಾವುದೇ ಸುಳಿವು ದೊರೆತಿಲ್ಲ ಎಂದು ಹುಲಿ ಹುಡುಕಾಟ ನಡೆಸಿರುವ ಮಹಾರಾಷ್ಟ್ರ ಅರಣ್ಯ...

ನವದೆಹಲಿ: ದೇಶದ ಖ್ಯಾತ ಹುಲಿ ಜೈ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದು ಯಾವುದೇ ಸುಳಿವು ದೊರೆತಿಲ್ಲ ಎಂದು ಹುಲಿ ಹುಡುಕಾಟ ನಡೆಸಿರುವ ಮಹಾರಾಷ್ಟ್ರ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಬಾಲಿವುಡ್ ನ ಬ್ಲಾಕ್ ಬಸ್ಟರ್ ಶೋಲೆ ಚಿತ್ರದಲ್ಲಿ ಅಭಿನಯಿಸಿದ್ದ ಅಮಿತಾಬ್ ಬಚ್ಚನ್ ಗೆ ಇರಿಸಿದ್ದ ಹೆಸರನ್ನು ಈ ಹುಲಿಗೆ ನೀಡಲಾಗಿತ್ತು. ಜೈ ಹುಲಿ ಏಪ್ರಿಲ್ 1 ರ ನಂತರ ಮಹಾರಾಷ್ಟ್ರದ ನಾಗಪುರ ಸಮೀಪದ ಉಮ್ರೆದ್ ಕರಹಂಡ್ಲ ಅಭಯಾರಣ್ಯಿಂದ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು.

ಜೈ ಹುಲಿಗಾಗಿ ಮಹಾರಾಷ್ಟ್ರ ಅರಣ್ಯಾಧಿಕಾರಿಗಳು ದಕ್ಷಿಣ ರಾಜ್ಯಗಳಲ್ಲಿ ಭಾರೀ ಹುಡುಕಾಟ ನಡೆಸಿದ್ದರು. ಆದರೂ ಹುಲಿಯ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಇಂದು ವಿಶ್ವ ಹುಲಿ ದಿನಾಚರಣೆ ಹಿನ್ನೆಲೆ ಕಳೆದು ಹೋದ ಹುಲಿಗಾಗಿ ಅಭಯಾರಣ್ಯದ ಸಿಬ್ಬಂದಿ ನೆನೆದಿದ್ದಾರೆ.

ಜೈ ಹುಲಿಗೆ ಎಲೆಕ್ಟ್ರಾನಿಕ್ ಟ್ರಾನ್ಸ್ ಮೀಟರ್ ಕೊರಳಲ್ಲಿದ್ದರೂ ಅದು ಕಾರ್ಯ ನಿರ್ವಹಿಸದಿರುವುದು ಅಧಿಕಾರಿಗಳಿಗೆ ಹುಲಿಯ ಜೀವಿತಾವಧಿ ಮೇಲೆ ಶಂಕೆ ಹುಟ್ಟಿಸಿದೆ. ಇನ್ನು ಜೈನ ಸುಳಿವು ನೀಡಿದವರಿಗೆ ಮಹಾರಾಷ್ಟ್ರ ಸರ್ಕಾರ 50 ಸಾವಿರ ನಗದು ಬಹುಮಾನ ಘೋಷಿಸಿದೆ.

ಈ ಬಹುಮಾನಕ್ಕಾಗಿ ಹುಲಿಯ ಹುಡುಕಾಟದಲ್ಲಿ ಸುತ್ತಮುತ್ತಲ ಗ್ರಾಮಸ್ಥರು ತೊಡಗಿದ್ದಾರೆ.

7 ವರ್ಷ ಪ್ರಾಯದ ಈ ಹುಲಿ 250 ಕೆಜಿ ತೂಕವಿತ್ತು. ಪ್ರವಾಸಿಗರ ಮೆಚ್ಚಿನ ಜೈ ಹುಲಿ ಇದೀಗ ನಾಪತ್ತೆಯಾಗಿರುವುದರಿಂದ ಪ್ರವಾಸಿಗರು ಆತಂಕ್ಕೆ ಒಳಗಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ತಮಿಳುನಾಡು ಜನತೆಗೆ CM ವಿಜಯ್ ಬಂಪರ್‌ ಗಿಫ್ಟ್;‌ ಸರ್ಕಾರಿ ನೌಕರರಿಗೆ 3ನೇ ಮಗುವಿಗೂ 1 ವರ್ಷ ಮಾತೃತ್ವ ರಜೆ; ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ!