ದೇಶ

ಕಾಶ್ಮೀರ ಯುವಕರಲ್ಲಿ ದೇಶಭಕ್ತಿ ಮೂಡಿಸುವುದೇ ದೊಡ್ಡ ಸವಾಲು: ರಾಜಕೀಯ ವಿಶ್ಲೇಶಕರ ಅಭಿಪ್ರಾಯ

Srinivas Rao BV
ಕೋಲ್ಕತಾ: ಕಾಶ್ಮೀರದಲ್ಲಿ ನಿರಂತರ ಗಲಭೆ ನಡೆಯುವುದರಿಂದ ಭಾರತಕ್ಕೆ ಯಾವುದೇ ಲಾಭವುಂಟಾಗುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕಣಿವೆಯ ಯುವಕರಿಗೆ ಕಾಶ್ಮೀರ ನಮ್ಮದು ಎಂಬ ಭಾವನೆಯನ್ನು ಉಂಟು ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ರಾಜಕೀಯ ವಿಶ್ಲೇಷಕರಿಂದ ಕೇಳಿಬಂದಿದೆ. 
ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು ಎದುರಿಸುವ ಬಿಎಸ್ಎಫ್ ಯೋಧರು ಹಾಗೂ ಸಿಆರ್ ಪಿಎಫ್ ಯೋಧರ ಸಮಸ್ಯೆ ಅರ್ಥವಾಗುತ್ತದೆ. ಆದರೆ ಸಮಸ್ಯೆಯನ್ನು ಬಗೆಹರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ ಎಂದು ಇಂಡಿಯಾನಾ ವಿವಿಯ ಅಮೆರಿಕನ್ ಮತ್ತು ಗ್ಲೋಬಲ್ ಸೆಕ್ಯುರಿಟಿ ಕೇಂದ್ರದ ನಿರ್ದೇಶಕ ಸುಮಿತ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. 
ಕಾಶ್ಮೀರದಲ್ಲಿ ಈಗ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಕೆಲವು ವಾರಗಳಷ್ಟೇ ಬೇಕು, ಆದರೆ ಮತ್ತೊಂದು ಬುರ್ಹಾನ್ ವನಿ ರೀತಿಯ ಪ್ರಕರಣ ನಡೆದರೆ ಮತ್ತೆ ಇಂತಹ ಗಲಭೆ ಸಂಭವಿಸುತ್ತದೆ. ಆದ್ದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ಕಾಶ್ಮೀರಿ ಯುವಕರಿಗೆ ಕಾಶ್ಮೀರ  ಭಾರತದ್ದು ಹಾಗೂ ನಮ್ಮದು ಎಂಬ ಭಾವನೆ ಮೂಡುವಂತೆ ಮಾಡುವುದೇ ದೊಡ್ಡ ಸವಾಲಿನ ಸಂಗತಿ ಎಂದು ಸುಮಿತ್ ಗಂಗೂಲಿ ಹೇಳಿದ್ದಾರೆ. 
SCROLL FOR NEXT