ಸಾಂದರ್ಭಿಕ ಚಿತ್ರ 
ದೇಶ

ಗರ್ಲ್ ಫ್ರೆಂಡ್ ಗೆ ಗರ್ಭಪಾತ ಮಾಡಿಸಲು ಕಳ್ಳತನಕ್ಕಿಳಿದ ವಿದ್ಯಾರ್ಥಿ!

ಗೆಳತಿಗೆ ಗರ್ಭಪಾತ ಮಾಡಿಸಲು ವಿದ್ಯಾರ್ಥಿಯೊಬ್ಬ ಕಳ್ಳತನಕ್ಕಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಬರೈಲಿಯಲ್ಲಿ ನಡೆದಿದೆ. ..

ಬರೇಲಿ: ಗೆಳತಿಗೆ ಗರ್ಭಪಾತ ಮಾಡಿಸಲು ವಿದ್ಯಾರ್ಥಿಯೊಬ್ಬ ಕಳ್ಳತನಕ್ಕಿಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಬರೈಲಿಯಲ್ಲಿ ನಡೆದಿದೆ.

ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ಅಮನ್ ಪಟೇಲ್ ತನ್ನ ಗೆಳತಿಗೆ ಗರ್ಭಪಾತ ಮಾಡಿಸಲು ಹಣಕ್ಕಾಗಿ ಕಳ್ಳತನಕ್ಕಿಳಿದು ಕಳ್ಳನಾಗಿ ಆರೆಸ್ಟ್ ಆಗಿದ್ದಾನೆ.

ಅಮನ್ ಪಟೇಲ್, ತನ್ನ ಗೆಳೆಯರಾದ ಪವನ್‍ಕುಮಾರ್, ಅನುರಾಗ್ ಶರ್ಮರನ್ನು ಸೇರಿಸಿಕೊಂಡು ಒಂದು ಗ್ಯಾಂಗ್ ಮಾಡಿಕೊಂಡು ಮೂವರು ಸೇರಿ ಬೈಕ್‍ಗಳು, ಮೊಬೈಲ್‍ಗಳನ್ನು ಕಳವು ಮಾಡಿದ್ದಾರೆ. ಮಹಿಳೆಯರ ಸರಗಳ ಅಪಹರಣ ಮಾಡಿದ್ದಾರೆ.

ಬೈಕ್ ಕಳೆದುಕೊಂಡ ವ್ಯಕ್ತಿಯೊಬ್ಬ ತನ್ನ ಬೈಕ್‍ನ್ನು ಲಟ್‍ಪುಟಕ್ ಪ್ರದೇಶದಲ್ಲಿ  ಯಾರೋ ಸವಾರಿ ಮಾಡುತ್ತಿದ್ದುದನ್ನು ನೋಡಿದ್ದಾಗಿ ತಿಳಿಸಿದಾಗ ಕಾರ್ಯಾಚರಣೆ ನಡೆಸಿದ ಪೂಲೀಸರು, ಪವನ್‍ಕುಮಾರ್‍ನನ್ನು ಬಂಧಿಸಿದ್ದಾರೆ. ನಂತರ ಅವನು ನೀಡಿದ ಸುಳಿವಿನ ಮೇಲೆ ಅಮನ್ ಪಟೇಲ್, ಅನುರಾಗ್ ಶರ್ಮರನ್ನು ಬಂಧಿಸಿದರು.

ಬಿಎಸ್ಸಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನನಗೂ-ಖಾಸಗಿ ಕಾಲೇಜೊಂದರ 19 ವರ್ಷದ ವಿದ್ಯಾರ್ಥಿನಿಗೂ ಸ್ನೇಹ ಬೆಳೆದು ಅದು ಪ್ರೇಮಕ್ಕೆ ತಿರುಗಿತು. ನಂತರ ಅವಳು ಗರ್ಭಿಣಿಯಾದಳು. ಅವಳಿಗೆ ಗರ್ಭಪಾತ ಮಾಡಿಸಲು ಹಣ ಬೇಕಾಗಿತ್ತು. ಮನೆಯಲ್ಲಿ ಕೇಳುವಂತಿರಲಿಲ್ಲ.  ಹಾಗಾಗಿ ಕಳ್ಳತನ ಮಾಡಿ ಮೂರು ತಿಂಗಳ ಗರ್ಭಿಣಿಯಾಗಿದ್ದ ಅವಳಿಗೆ ಅಬಾರ್ಷನ್ ಮಾಡಿಸಿದೆ. ನಾನು ಕಳ್ಳತನ ಆರಂಭಿಸಿದಾಗಿನಿಂದ ಮನೆಯವರ ಬಳಿ ಹಣ ಕೇಳಿಲ್ಲ ಎಂದು ವಿದ್ಯಾರ್ಥಿ ತಿಳಿಸಿದ್ದಾಗಿ ನಗರ ಪೂಲೀಸ್ ಎಸ್‍ಪಿ ಸಮೀರ್ ಸೌರಭ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!