ಸಂಸದೆ ಹೇಮಾಮಾಲಿನಿ ಅವರ ಫೋಟೋ (ಟ್ವಿಟರ್ ಚಿತ್ರ) 
ದೇಶ

ಅತ್ತ ಮಥುರಾದಲ್ಲಿ ಪೊಲೀಸರ ಗನ್ ಶೂಟ್; ಇತ್ತ ಸಂಸದೆ ಹೇಮಾ ಮಾಲಿನಿ ಫೋಟೋಶೂಟ್!

ಇಡೀ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಥುರಾ ಘರ್ಷಣೆ ವೇಳೆ ಪೊಲೀಸರು ಉದ್ರಿಕ್ತರೊಂದಿಗೆ ಗನ್ ಶೂಟಿಂಗ್ ನಲ್ಲಿ ಬಿಸಿಯಾಗಿದ್ದರೆ, ಸ್ಥಳೀಯ ಸಂಸದೆ ನಟಿ ಹೇಮಾಮಾಲಿನಿ ಮಾತ್ರ ಫೋಟೋ ಶೂಟಿಗ್ ನಲ್ಲಿ ಬಿಸಿಯಾಗಿದ್ದರಂತೆ.

ಮಥುರಾ: ಇಡೀ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಥುರಾ ಘರ್ಷಣೆ ವೇಳೆ ಪೊಲೀಸರು ಉದ್ರಿಕ್ತರೊಂದಿಗೆ ಗನ್ ಶೂಟಿಂಗ್ ನಲ್ಲಿ ಬಿಸಿಯಾಗಿದ್ದರೆ, ಸ್ಥಳೀಯ ಸಂಸದೆ ನಟಿ ಹೇಮಾಮಾಲಿನಿ ಮಾತ್ರ ಫೋಟೋ ಶೂಟಿಗ್ ನಲ್ಲಿ ಬಿಸಿಯಾಗಿದ್ದರಂತೆ.

ಇಂತಹುದೊಂದು ಸುದ್ದಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ಇಂತಹ ಆರೋಪಕ್ಕೆ ಕಾರಣವಾಗಿರುವುದು ಮಥುರಾ ಸಂಸದೆ ಹೇಮಾಮಾಲಿನಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳು. ಅತ್ತ ಇಡೀ ಮಥುರಾ ಘರ್ಷಣೆಯಿಂದಾಗಿ ಪ್ರಕ್ಷುಬ್ಧವಾಗಿದ್ದರೆ ಸ್ಥಳೀಯ ಸಂಸದೆಯಾಗಿರುವ ಹೇಮಾಮಾಲಿನಿ ಮಾತ್ರ ಕಡಲತಡಿಯ ತಮ್ಮ ಫೋಟೋ ಶೂಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.

ಈ ಫೋಟೋಗಳಿಗೆ ವ್ಯಾಪಕ ಟೀಕೆಗಳು ಎದುರಾಗುತ್ತಿದ್ದಂತೆಯೇ ಎಚ್ಚೆತ್ತ ಹೇಮಾ ಮಾಲಿನಿ ಕೂಡಲೇ ಆ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಹೇಮಾಮಾಲಿನಿ ಅವರ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ನಿನ್ನೆ ಮಥುರಾದಲ್ಲಿ ಒತ್ತುವರಿ ಕಾರ್ಯಾಚರಣೆ ವೇಳೆ ನಡೆದ ಭೀಕರ ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು 21 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೇಮಾಮಾಲಿನಿ ಅವರ ಟ್ವೀಟ್ ಸರಣಿ ಇಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Nepal protest: KP Sharma Oli ರಾಜಿನಾಮೆ; ಮನೆ, ಸಂಸತ್ ಕಟ್ಟಡಕ್ಕೆ ಬೆಂಕಿ; ನೇಪಾಳ ತೊರೆದ ಪ್ರಧಾನಿ?

ನೇಪಾಳ ಪರಿಸ್ಥಿತಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ, ಭಾರತೀಯ ಪ್ರಜೆಗಳು ಜಾಗರೂಕರಾಗಿರಿ; MEA

'ಇದ್ರೆ ನೆಮ್ದಿಯಾಗಿರ್ಬೇಕು': 'ನಂಗೆ ಒಂಚೂರು ವಿಷ ಬೇಕು'... ನಟ Darshan ಬೇಡಿಕೆಗೆ ಕೋರ್ಟ್ ಶಾಕ್! ಅಗಿದ್ದೇನು?

Karisma's kids: ಸಂಜಯ್ ಕಪೂರ್ ರೂ. 30,000 ಕೋಟಿ ಮೊತ್ತದ ಎಸ್ಟೇಟ್ ನಲ್ಲಿ ಪಾಲು; ಕೋರ್ಟ್ ಮೆಟ್ಟಿಲೇರಿದ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮಕ್ಕಳು!

ದ್ವೇಷ ಭಾಷಣ ಪ್ರಕರಣ: ಅನ್ಸಾರಿ ಶಿಕ್ಷೆ ಅಮಾನತುಗೊಳಿಸಿದ ಹೈಕೋರ್ಟ್; ಶಾಸಕತ್ವ ಪುನಃಸ್ಥಾಪನೆ

SCROLL FOR NEXT