T20 World Cup 2026: ರನ್ ಗಳಿಸಲು ಸಂಜು ಸ್ಯಾಮ್ಸನ್ ಹೆಣಗಾಟ; ಅಗ್ರ ಕ್ರಮಾಂಕದಲ್ಲಿ ಇಶಾನ್ ಕಿಶನ್ ಜಾಗ ಫಿಕ್ಸ್!

ಕಳೆದ ವಾರ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 103 ರನ್ ಗಳಿಸಿದ್ದ ಇಶಾನ್, ಪವರ್‌ಪ್ಲೇ ಒಳಗೆ ಅಭಿಷೇಕ್ (17 ಎಸೆತಗಳಲ್ಲಿ 24 ರನ್, ರಿಟೈರ್ಡ್ ಔಟ್) ಜೊತೆ 80 ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಪ್ರದರ್ಶನ ನೀಡಿದರು.
Ishan Kishan's 53 and bowlers help India register 30-run win against South Africa in T20 World Cup warm-up fixture
ಇಶಾನ್ ಕಿಶನ್
Updated on

ಟಿ20 ವಿಶ್ವಕಪ್‌ 2026ಕ್ಕೂ ಮುನ್ನ ಬುಧವಾರ ನವಿ ಮುಂಬೈನಲ್ಲಿ ನಡೆದ ಏಕೈಕ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 30 ರನ್‌ಗಳ ಜಯ ಸಾಧಿಸಿದೆ. ಸದ್ಯ ಭರ್ಜರಿ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡಿದ್ದು, ಮುಂಬರುವ ಪಂದ್ಯಾವಳಿಯಲ್ಲಿ ಅಗ್ರ ಕ್ರಮಾಂಕದ ಸ್ಥಾನವನ್ನು ಫಿಕ್ಸ್ ಮಾಡಿಕೊಂಡಿದ್ದಾರೆ. ಏಳು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳ ನೆರವಿನಿಂದ ಇಶಾನ್ 20 ಎಸೆತಗಳಲ್ಲಿ 53 ರನ್ ಗಳಿಸಿದರು.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಐದು ವಿಕೆಟ್‌ಗೆ 241 ರನ್‌ ಕಲೆಹಾಕಿತು. ಹಾಲಿ ಚಾಂಪಿಯನ್‌ ತಂಡವು ಅಭಿಷೇಕ್ ಶರ್ಮಾ (2/32) ಅವರ ಮೂರು ಓವರ್‌ಗಳು ಸೇರಿದಂತೆ ಒಂಬತ್ತು ಬೌಲಿಂಗ್ ಆಯ್ಕೆಗಳನ್ನು ಬಳಸಿಕೊಂಡಿತು. ದಕ್ಷಿಣ ಆಫ್ರಿಕಾವನ್ನು 210/7ಕ್ಕೆ ಸೀಮಿತಗೊಳಿಸಿತು.

ಮುಂಚೂಣಿಯ ವೇಗದ ಬೌಲರ್ ಹರ್ಷಿತ್ ರಾಣಾ (0/16) ಪಂದ್ಯದ ಸಮಯದಲ್ಲಿ ಕೇವಲ ಒಂದು ಓವರ್ ಬೌಲ್ ಮಾಡಿದರು ಮತ್ತು ನಂತರ ಮೈದಾನವನ್ನು ತೊರೆದರು.

ಈಮಧ್ಯೆ, ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಭಾಗವಹಿಸಲಿಲ್ಲ.

ಕಳೆದ ವಾರ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ 103 ರನ್ ಗಳಿಸಿದ್ದ ಇಶಾನ್, ಪವರ್‌ಪ್ಲೇ ಒಳಗೆ ಅಭಿಷೇಕ್ (17 ಎಸೆತಗಳಲ್ಲಿ 24 ರನ್, ರಿಟೈರ್ಡ್ ಔಟ್) ಜೊತೆ 80 ರನ್‌ಗಳ ಜೊತೆಯಾಟ ನಡೆಸಿ ಉತ್ತಮ ಪ್ರದರ್ಶನ ನೀಡಿದರು.

Ishan Kishan's 53 and bowlers help India register 30-run win against South Africa in T20 World Cup warm-up fixture
India vs New Zealand 4th T20I: ಮತ್ತೊಮ್ಮೆ ಕಳಪೆ ಪ್ರದರ್ಶನ; ಸಂಜು ಸ್ಯಾಮ್ಸನ್ ವಿರುದ್ಧ ಸುನೀಲ್ ಗವಾಸ್ಕರ್ ಕಿಡಿ

ಸಂಜು ಸ್ಯಾಮ್ಸನ್ ಇದೀಗ ರನ್ ಗಳಿಸಲು ಹೆಣಗಾಡುತ್ತಿರುವುದರಿಂದ, ಫೆಬ್ರುವರಿ 7 ರಂದು ವಾಂಖೆಡೆಯಲ್ಲಿ ಯುಎಸ್ಎ ವಿರುದ್ಧದ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ಅಭಿಷೇಕ್ ಜೊತೆಗೆ ಇಶಾನ್ ಬ್ಯಾಟಿಂಗ್ ಆರಂಭಿಸುವ ನಿರೀಕ್ಷೆಯಿದೆ.

ಇಶಾನ್ ತನ್ನ ಅರ್ಧಶತಕ ಗಳಿಸಿದ ತಕ್ಷಣವೇ ರಿಟೈರ್ಡ್ ಔಟ್ ಆಗಿ ಹೊರನಡೆದರು. ವಿಕೆಟ್ ಕೀಪರ್-ಬ್ಯಾಟರ್ ಅದ್ಭುತ ಇನಿಂಗ್ಸ್ ಮೂಲಕ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದರು. ಆಟದ ಐದನೇ ಓವರ್‌ನಲ್ಲಿ ಇಶಾನ್ ಅನ್ರಿಚ್ ನಾರ್ಟ್ಜೆ ಅವರ ಬೌಲಿಂಗ್‌ನಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದಾಗ ಒಟ್ಟು 29 ರನ್‌ಗಳು ಬಂದವು.

ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ತಿಲಕ್ ವರ್ಮಾ, ಐಸಿಸಿ ಟೂರ್ನಿಗೆ ತಮ್ಮ ಫಿಟ್ನೆಸ್ ಮತ್ತು ಸಿದ್ಧತೆಯನ್ನು ಸಾಬೀತುಪಡಿಸಿದ್ದಾರೆ. ಕೇವಲ 19 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳು ಮತ್ತು ಅಷ್ಟೇ ಬೌಂಡರಿಗಳೊಂದಿಗೆ 45 ರನ್ ಗಳಿಸಿದ್ದಾಗ ಮಾರ್ಕೊ ಜಾನ್ಸೆನ್ ಅವರಿಗೆ ವಿಕೆಟ್ ಒಪ್ಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com