ಜಾಟ್ ಸಮುದಾಯದ ಪ್ರತಿಭಟನೆ ಅಂಗವಾಗಿ ಗುರುಗಾಂವ್ ರೈಲ್ವೆ ನಿಲ್ದಾಣದಲ್ಲಿ ಪಹರೆ ಕಾಯುತ್ತಿರುವ ಪೊಲೀಸ್ ಸಿಬ್ಬಂದಿಗಳು. 
ದೇಶ

ಜಾಟ್ ಪ್ರತಿಭಟನೆ: ಮೊದಲ ದಿನ ಸಂಪೂರ್ಣ ಶಾಂತ

ಮೀಸಲಾತಿಗಾಗಿ ಆಗ್ರಹಿಸಿ ಹರ್ಯಾಣ ರಾಜ್ಯದ ಹಲವು ಕಡೆಗಳಲ್ಲಿ ಜಾಟ್ ಸಮುದಾಯದವರು ಭಾನುವಾರ ಮತ್ತೆ ...

ಚಂಡೀಗಢ: ಮೀಸಲಾತಿಗಾಗಿ ಆಗ್ರಹಿಸಿ ಹರ್ಯಾಣ ರಾಜ್ಯದ ಹಲವು ಕಡೆಗಳಲ್ಲಿ ಜಾಟ್ ಸಮುದಾಯದವರು ಭಾನುವಾರ ಮತ್ತೆ ಪ್ರತಿಭಟನೆ ಮುಂದುವರಿಸಿದ್ದು, ರಸ್ತೆ ಮತ್ತು ರೈಲ್ವೆ ಸಂಚಾರ ಎಂದಿನಂತಿದ್ದವು. ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

ಪ್ರತಿಭಟನೆ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆ ಇಂದು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ರಾಜ್ಯ ಗೃಹ ಕಾರ್ಯದರ್ಶಿ ರಾಮ್ ನಿವಾಸ್ ತಿಳಿಸಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಧರಣಿ ಕುಳಿತಿರಲಿಲ್ಲ. ಕೆಲವು ಕಡೆಗಳಲ್ಲಿ ಧರಣಿ ನಡೆದಿದ್ದು, ಸಂಬಂಧಪಟ್ಟ ಉಪ ಆಯುಕ್ತರಿಗೆ ಮನವಿ ಸಲ್ಲಿಸಿ ಧರಣಿ ಮುಂದುವರಿಸಿದರು.ಪ್ರತಿಭಟನಾಕಾರರು ಯಾವುದೇ ಹೆದ್ದಾರಿ, ರೈಲ್ವೆ ಮಾರ್ಗವನ್ನು ತಡೆಯದಿದ್ದರಿಂದ ಟ್ರಾಫಿಕ್ ಸಾಮಾನ್ಯವಾಗಿತ್ತು.

ಕೆಲವರು ಪ್ರತಿಭಟನೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಿಚ್ಚು ಹತ್ತಿಸಲೆತ್ನಿಸಿದಾಗ ಅಂತವರ ವಿರುದ್ಧ ಕೇಸು ದಾಖಲಿಸಲಾಯಿತು. ಹರ್ಯಾಣ ಸರ್ಕಾರ ಮುಷ್ಕರದ ಬಗ್ಗೆ ಸತತ ನಿಗಾ ವಹಿಸಿದ್ದು, ಶಾಂತಿಯನ್ನು ಕದಡಲೆತ್ನಿಸುವವರನ್ನು ಪತ್ತೆಹಚ್ಚಲು  ವಿಡಿಯೋ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ರಾಮ್ ನಿವಾಸ್ ಜನತೆಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹತೋಟಿಯಲ್ಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮೊಹಮ್ಮದ್ ಅಕಿಲ್ ತಿಳಿಸಿದ್ದಾರೆ.

ಜಾಟ್ ಮತ್ತು ಇತರ ಐದು ಸಮುದಾಯಗಳಿಗೆ ಮೀಸಲಾತಿ ನೀಡಿ ಹರ್ಯಾಣ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಾಟ್ ಸಮುದಾಯದವರು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ಒಟ್ಟು 21 ಜಿಲ್ಲೆಗಳಲ್ಲಿ ಕನಿಷ್ಠ 9 ಜಿಲ್ಲೆಗಳಲ್ಲಿ ಇಂದು ತೀವ್ರ ಕಟ್ಟೆಚ್ಚರ ಘೋಷಿಸಲಾಗಿತ್ತು. ಮೀಸಲಾತಿ ನಿಯಮ ಜಾರಿಗೆ ತರಲು ಜಾಟ್ ಸಮುದಾಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT