ನವದೆಹಲಿ: ಸಾಲದ ದೊರೆ ವಿಜಯ್ ಮಲ್ಯ ವಿರುದ್ಧ ಬಂಧನ ವಾರೆಂಟ್ ಮಾಡಲು ಕೆಲವು ಸ್ಪಷ್ಟನೆ ನೀಡುಂತೆ ಜಾರಿ ನಿರ್ದೇಶನಾಲಯಕ್ಕೆ ಇಂಟರ್ ಪೋಲ್ ಭಾನುವಾರ ಮನವಿ ಮಾಡಿಕೊಂಡಿದೆ.
ರು. 900 ಕೋಟಿ ತೆರಿಗೆ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ದೇಶ ತೊರೆದು ಲಂಡನ್ ನಲ್ಲಿ ನೆಲೆಯೂರಿರುವ ವಿಜಯ್ ಮಲ್ಯ ವಿರುದ್ಧ ಜಾಗತಿಕ ಬಂಧನದ ವಾರೆಂಟ್ ಹೊರಡಿಸುವಂತೆ ಈ ಹಿಂದೆ ಭಾರತ ಇಂಟರ್ ಪೋಲ್ ಗೆ ಮನವಿ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮಲ್ಯ ವಿರುದ್ಧದ ಆರೋಪಗಳ ಕುರಿತಂತೆ ಪೂರಕ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆಂ ಇಂಟರ್ ಪೋಲ್ ಪೊಲೀಸರು ಜಾರಿ ನಿರ್ದೇಶನಾಯಲಕ್ಕೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಮಲ್ಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಕೆಲವು ಸ್ಪಷ್ಟ ಮಾಹಿತಿಗಳು ಅಗತ್ಯವಿದ್ದು, ಜಾಗತಿಕ ಪೊಲೀಸರು ಮಲ್ಯ ವಿರುದ್ಧವಿರುವ ಪ್ರಕರಣಗಳು ಹಾಗೂ ಸಾಲದ ಕುರಿತ ಕೆಲಸ ಮಾಹಿತಿಗಳನ್ನು ಜಾರಿ ನಿರ್ದೇಶನಾಲಯದ ಬಳಿ ಕೇಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.