ದೇಶ

ಪತ್ನಿ ಚಿನ್ನಾಭರಣ, ಮೇಕೆ ಮಾರಿ ಟಾಯ್ಲೆಟ್ ಕಟ್ಟಿಸಿದ ಬುಡಕಟ್ಟು ವ್ಯಕ್ತಿ

Lingaraj Badiger
ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರೆಪಿತನಾದ ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಪತ್ನಿಯ ಚಿನ್ನಾಭರಣ ಹಾಗೂ ಮೇಕೆಯನ್ನು ಮಾರಾಟ ಮಾಡಿ, ಬಂದ ಹಣದಿಂದ ರಾಜಸ್ಥಾನದ ದುಂಗರ್ ಪುರ್ ಜಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಟಾಯ್ಲೆಟ್ ಕಟ್ಟಿಸಿದ್ದಾನೆ.
ಸ್ಥಳೀಯ ಕಾರ್ಯಕರ್ತರು ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಪ್ರಚಾರ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ದಿನಗೂಲಿ ಮಾಡುತ್ತಿರುವ ಕಾಂತಿ ಲಾಲ್ ರೋಟ್ ತನ್ನ ಪತ್ನಿಯ ಆಭರಣ ಹಾಗೂ ಮೇಕೆ ಮಾರಿ ಟಾಯ್ಲೆಟ್ ಕಟ್ಟಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ. 
ರೋಟ್ ಅವರು ತನ್ನ ತಾಯಿ, ಪತ್ನಿ, ಮಕ್ಕಳು ಹಾಗೂ ಸಹೋದರನ ವಿಧವೆ ಪತ್ನಿಯೊಂದಿಗೆ ದುಂಗರ್ ಪುರ್ - ರತನಪುರ್ ರಸ್ತೆಯಲ್ಲಿ ವಾಸವಾಗಿದ್ದಾರೆ. ಇತ್ತೀಚಿಗಷ್ಟೆ ಸ್ವಚ್ಛ ಭಾರತ ಅಭಿಯಾನದ ಕಾರ್ಯಕರ್ತರು ರೋಟ್ ರನ್ನು ಭೇಟಿ ಮಾಡಿ, ನಿಮ್ಮ ಮನೆಯಲ್ಲಿ ಟಾಯ್ಲೆಟ್ ಕಟ್ಟಿಸು, ಅದಕ್ಕೆ ಕೇಂದ್ರ ಸರ್ಕಾರ 4 ಸಾವಿರ ರುಪಾಯಿ ಮತ್ತು ರಾಜ್ಯ ಸರ್ಕಾರದಿಂದ ಧನ ಸಹಾಯ ಬರಲಿದೆ ಎಂದು ಮನವೊಲಿಸಿದ್ದರು.
SCROLL FOR NEXT