ದೇಶ

ಚತ್ತೀಸ್ ಗಢದಲ್ಲಿ 100 ನಕ್ಸಲರಿಂದ ಐಟಿಬಿಪಿ ಕ್ಯಾಂಪ್ ಮೇಲೆ ದಾಳಿ

Lingaraj Badiger
ರಾಯಪುರ್: ಚತ್ತೀಸ್ ಗಢದ ಕೊಂಡಗಾವ್ ಜಿಲ್ಲೆಯಲ್ಲಿ ಐಟಿಬಿಪಿ ಅರೆಸೇನಾಪಡೆಯ ಕ್ಯಾಂಪ್ ಮೇಲೆ ಗುರುವಾರ ಬೆಳಗಿನ ಜಾವ ನಕ್ಸಲರು ಭಾರಿ ಗುಂಡಿನ ದಾಳಿ ಮತ್ತು ರಾಕೇಟ್ ಗಳನ್ನು ಉಡಾಯಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಕಳೆದ ಮಧ್ಯರಾತ್ರಿ ಸುಮಾರು 100ಕ್ಕೂ ಹೆಚ್ಚು ನಕ್ಸಲರು ಐಟಿಬಿಪಿ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದಾರೆ.
ರಣಪಾಲ್ ದಲ್ಲಿರುವ ಇಂಡೋ-ಟಿಬೆಟಿಯನ್ ಗಡಿ ರಕ್ಷಣಾ ಪಡೆಯ 41 ಬಟಾಲಿಯನ್ ಮೇಲೆ ನಕ್ಸಲರು ದಾಳಿ ನಡೆಸಿದ್ದು, ಸುಮಾರು 100ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ನಕ್ಸಲರು ಕ್ಯಾಂಪ್ ಅನ್ನು ಮೂರುಕಡೆಯಿಂದ ಸುತ್ತುವರೆದಿದ್ದರು. ನಕ್ಸಲರ ಗುಂಡಿನ ದಾಳಿಗೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ನಕ್ಸಲರು ಮತ್ತು ರಕ್ಷಣಾ ಪಡೆ ನಡುವೆ ಸುಮಾರು 600 ಸುತ್ತು ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಯಾವುದೇ ರಕ್ಷಣಾ ಸಿಬ್ಬಂದಿ ಮೃತಪಟ್ಟ ಬಗ್ಗೆ ಇದುವರೆಗೂ ವರದಿಯಾಗಿಲ್ಲ. ಅಲ್ಲದೆ ದಾಳಿಯ ನಂತರ ನಕ್ಸಲರು ಕಾಡಿನಲ್ಲಿ ಅವಿತುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT