ಸಾಂದರ್ಭಿಕ ಚಿತ್ರ 
ದೇಶ

ಹೈಪ್ರೊಫೈಲ್ ವೇಶ್ಯಾವಾಟಿಕೆಯಲ್ಲಿ ನಟಿಯರು, ಮಾಡೆಲ್ ಗಳು ಭಾಗಿ, ಪಿಂಪ್ ಬಂಧನ

ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ನಡೆಯುತ್ತಿದ್ದ ಹೈಪ್ರೊಫೈಲ್ ವೇಶ್ಯಾವಾಟಿಕೆಯಲ್ಲಿ ನಟಿಯರು ಹಾಗೂ ಮಾಡೆಲ್ ಗಳು ಭಾಗಿಯಾಗಿದ್ದು, ಈ ಸಂಬಂಧ...

ಪಣಜಿ: ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ನಡೆಯುತ್ತಿದ್ದ ಹೈಪ್ರೊಫೈಲ್ ವೇಶ್ಯಾವಾಟಿಕೆಯಲ್ಲಿ ನಟಿಯರು ಹಾಗೂ ಮಾಡೆಲ್ ಗಳು ಭಾಗಿಯಾಗಿದ್ದು, ಈ ಸಂಬಂಧ ಪ್ರಮುಖ ಪಿಂಪ್ ಒಬ್ಬನನ್ನು ಬಂಧಿಸಲಾಗಿದೆ ಎಂದು ಗೋವಾ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಹೈಪ್ರೊಫೈಲ್ ವೇಶ್ಯಾವಾಟಿಕೆಯಲ್ಲಿ ಖ್ಯಾತ ರಾಜಕಾರಣಿಗಳು, ನಟಿಯರು ಹಾಗೂ ಮಾಡೆಲ್ ಗಳು ಭಾಗಿಯಾಗಿರುವ ಬಗ್ಗೆ ಬಲವಾದ ಸಾಕ್ಷ್ಯಗಳು ಮತ್ತು ಇತರೆ ಮಾಹಿತಿಗಳನ್ನು ಪಿಂಪ್ ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಪರಾಧ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ಕಶ್ಯಪ್ ಅವರು ಹೇಳಿದ್ದಾರೆ.
ಪಿಂಪ್ ಆನಂದ್ ಕುಮಾರ್ ಅಲಿಯಾಸ್ ಆಂಡಿಯನ್ನು ಇಂದು ಪಣಜಿಯ ಹೊರವಲಯದಲ್ಲಿರುವ ಟೋನಿ ಹೌಸಿಂಗ್ ಕಾಲೋನಿಯ ಆತನ ಮನೆಯಲ್ಲಿ ಬಂಧಿಸಲಾಗಿದೆ.ಆತನಿಂದ ಹಲವು ಸಾಕ್ಷ್ಯಗಳು, ಹೈಪ್ರೊಫೈಲ್ ಗಿರಾಕಿಗಳ ಪಟ್ಟಿ ಹಾಗೂ ನಟಿಯರ ಮತ್ತು ಮಾಡೆಲ್ ಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಿಂಪ್ ನೀಡಿದ ಪಟ್ಟಿಯಲ್ಲಿ ಹಲವು ರಾಜಕಾರಣಿಗಳ, ಸೆಲೆಬ್ರಿಟಿಗಳ, ನಟಿಯರ ಹಾಗೂ ಮಾಡೆಲ್ ಗಳ ಹೆಸರುಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

SCROLL FOR NEXT