ದೇಶ

ಕೈರಾನದಲ್ಲಿ ಹಿಂದೂಗಳ ಸಾಮೂಹಿಕ ವಲಸೆಗೆ ಹಿಂದೂ ವಿರೋಧಿ ಸಿದ್ಧಾಂತವೇ ಕಾರಣ: ಆರ್ ಎಸ್ ಎಸ್ ಮುಖಂಡ

Srinivas Rao BV

ನವದೆಹಲಿ: ಉತ್ತರ ಪ್ರದೇಶದ ಕೈರಾನದಲ್ಲಿ ಹಿಂದೂಗಳ ಸಾಮೂಹಿಕ ವಲಸೆಗೆ ಹಿಂದೂ ವಿರೋಧಿ ಸಿದ್ಧಾಂತವೇ ಕಾರಣ ಎಂದು ಆರ್ ಎಸ್ ಎಸ್ ನ ನಾಯಕ ರಾಕೇಶ್ ಸಿನ್ಹಾ ಹೇಳಿದ್ದಾರೆ.

1947 ರಲ್ಲಿ ಭಾರತ ವಿಭಜನೆಗೆ ಕಾರಣವಾದ ಜಿನ್ನಾ ಮನಸ್ಥಿತಿಯ ಹಿಂದೂ ವಿರೋಧಿ ಸಿದ್ಧಾಂತವೇ ಇದು ಕೈರಾನದಲ್ಲಿ ಹಿಂದೂಗಳ ಸಾಮೂಹಿಕ ವಲಸೆಗೆ ಕಾರಣವಾಗಿರುವ ಅಂಶವಾಗಿದೆ ಎಂದು ರಾಕೇಶ್ ಸಿನ್ಹಾ ಆರೋಪಿಸಿದ್ದಾರೆ. ಕೈರಾನದಲ್ಲಿ ಹಿಂದೂ ಕುಟುಂಬಗಳು ಸಾಮೂಹಿಕ ವಲಸೆ ಹೋಗುತ್ತಿರುವುದು ಆತಂಕಕಾರಿ ವಿಷಯವಾಗಿದ್ದು ಹಿಂದೂಗಳಿಗೆ ಪುನರ್ವಸತಿ ಕಲ್ಪಿಸುವುದನ್ನು ಸ್ವಾಗತಿಸುತ್ತೇವೆ, ಇದು ಕೇವಲ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಸೀಮಿತವಾದ ವಿಷಯವಲ್ಲ ಬದಲಾಗಿ ಜಿನ್ನಾ ಮಾದರಿಯ ಮಾನಸಿಕತೆ ವಿರುದ್ಧ ಹೋರಾಡುವ ಬಗೆಗಿನ ಪ್ರಶ್ನೆ ಎಂದು ರಾಕೇಶ್ ಸಿನ್ಹಾ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಕೈರಾನ ಮತ್ತೊಂದು ಕಾಶ್ಮೀರವಾಗುತ್ತಿದ್ದು ಮುಸ್ಲಿಂ ಬಹುಸಂಖ್ಯಾತರಿರುವ ಪ್ರದೇಶದಲ್ಲಿ ಹಿಂದೂಗಳ ಸಾಮೂಹಿಕ ವಲಸೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಇದು ಯೋಜಿತ ರೀತಿಯಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಸಿದ್ಧಾಂತ ಎಂದು ರಾಕೇಶ್ ಸಿನ್ಹಾ ಆರೋಪಿಸಿದ್ದಾರೆ.

ಸಾಮೂಹಿಕ ವಲಸೆ ಕುರಿತು ಮಾಹಿತಿ ಬಿಡುಗಡೆ ಮಾಡಿದ್ದ ಬಿಜೆಪಿ ಸಂಸದ ಹುಕುಂ ಸಿಂಗ್, 2014 ರಿಂದ ಹಿಂದೂ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದು, ಮುಸ್ಲಿಮರು ಬಹುಸಂಖ್ಯಾತರಿರುವ ಕೈರಾನದಲ್ಲಿ ಹಿಂದೂಗಳನ್ನೂ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ 10 ಕೋಮು ಹತ್ಯೆಗಳು ಸಂಭವಿಸಿದ್ದು ಉತ್ತರ ಪ್ರದೇಶದ ಕೈರಾನದಲ್ಲಿ ಮಿನಿ ಕಾಶ್ಮೀರ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದರು.  346 ಹಿಂದೂ ಕುಟುಂಬಗಳು  ಸಾಮೂಹಿಕ ವಲಸೆ ಹೋಗಿರುವುದರ ಕುರಿತು ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಹುಕುಂ ಸಿಂಗ್ ಮಾಹಿತಿ ನೀಡಿದ ಬೆನ್ನಲ್ಲೇ ಬಿಜೆಪಿ 9 ಸದಸ್ಯರ ಸಮಿತಿಯನ್ನು ರಚಿಸಿ ವರದಿ ಕೇಳಿದೆ.

SCROLL FOR NEXT