ದೇಶ

ಸೋಲಿನಿಂದ ವಿಷಯಾಂತರ ಮಾಡಲು ಬಿಜೆಪಿಯಿಂದ ಕೈರಾನ ವಿವಾದ ಬಳಕೆ: ಮಾಯಾವತಿ

Srinivas Rao BV

ಲಖನೌ: ಉತ್ತರ ಪ್ರದೇಶದ ಕೈರಾನದಲ್ಲಿ ಹಿಂದೂ ಕುಟುಂಬಗಳ ಸಾಮೂಹಿಕ ವಲಸೆ ವಿಷಯವನ್ನು ಬಿಜೆಪಿ ತನ್ನ ಸೋಲನ್ನು ಮುಚ್ಚಿಹಾಕಲು ಬಳಸಿಕೊಳ್ಳುತ್ತಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ವಿಧಾನಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. ಆದರೆ ಸೋಲನ್ನು ಕೈರಾಣ ಹಿಂದೂಗಳ ಸಾಮೂಹಿಕ ವಿಷಯವ6/14/2016ನ್ನು ದೊಡ್ಡದು ಮಾಡುವುದರಿಂದ ಮುಚ್ಚಿಹಾಕಲು ಬಿಜೆಪಿ ಯತ್ನಿಸುತ್ತಿದೆ ಎಂಬುದು ಮಾಯಾವತಿ ಅವರ ಆರೋಪವಾಗಿದೆ.

ಸೋಲನ್ನು ಮುಚ್ಚಿಹಾಕುವುದಷ್ಟೇ ಅಲ್ಲದೇ ಬಿಜೆಪಿ ಕೈರಾನ ವಿಷಯವನ್ನು ಕೋಮು ಭಾವನೆ ಕೆರಳಿಸುವುದಕ್ಕೆ ಬಳಸಿಕೊಳ್ಳುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ. ಯೋಜಿತ ಪಿತೂರಿಯ ಭಾಗವಾಗಿ ವಿಧಾನಪರಿಷತ್, ರಾಜ್ಯಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಕೈರಾನದಲ್ಲಿ ಹಿಂದೂಗಳನ್ನು ಸಾಮೂಹಿಕ ವಲಸೆ ಹೋಗುವಂತೆ ಮುಸ್ಲಿಮರು ಒತ್ತಡ ಹೇರುತ್ತಿರುವ ವಿಷಯವನ್ನು ದೊಡ್ಡದು ಮಾಡಿದ್ದು ಇದೊಂದು ಕೋಮು ಭಾವನೆ ಕೆರಳಿಸಲು ಹೂಡಿರುವ ತಂತ್ರ ಎಂಬುದು ಸ್ಪಷ್ಟವಾಗುತ್ತದೆ ಎಂದು ಮಾಯಾವತಿ ಹೇಳಿದ್ದಾರೆ. ಉತ್ತರ ಪ್ರದೇಶದ 50 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬರಪರಿಸ್ಥಿತಿ ಇರುವ ಕಾರಣ ಸಾಮೂಹಿಕ ವಲಸೆ ಕಂಡುಬರುತ್ತಿದೆ. ಇದಕ್ಕೆ ಕೇಂದ್ರವೇ ಹೊಣೆ ಎಂದು ಮಾಯಾವತಿ ದೂರಿದ್ದಾರೆ.

SCROLL FOR NEXT