ದೇಶ

ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಹಿಂದೂಗಳ ಹತ್ಯೆ: ವಲಸೆ ಭೀತಿ

Srinivas Rao BV

ನವದೆಹಲಿ: ನೆರೆಯ ರಾಷ್ಟ್ರ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಹತ್ಯೆ ಹೆಚ್ಚಾಗುತ್ತಿದ್ದು, ಹಿಂದೂಗಳಲ್ಲಿ ವಲಸೆ ಭೀತಿ ಎದುರಾಗಿದೆ. ಈ ಹಿಂದೆಯೂ ಹಿಂದೂಗಳನ್ನು ಬಾಂಗ್ಲಾದಿಂದ ಹೊರಕಳುಹಿಸಲು ಅನೇಕ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಆಸ್ತಿ ಕಬಳಿಸಿ ಅವರನ್ನು ಹೊರಕಳುಹಿಸುವುದಕ್ಕಾಗಿ ಬೇರೆಯದ್ದೇ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಸಿಕ್ಕಸಿಕ್ಕಲ್ಲಿ ಹತ್ಯೆ ಮಾಡಲಾಗುತ್ತಿದೆ ಎಂದು ಹಿಂದೂ, ಕ್ರೈಸ್ತ, ಬೌದ್ಧ ಒಕ್ಕೂಟ ಪರಿಷತ್ ನ ಮುಖ್ಯಸ್ಥ ಕಾಜಲ್ ದೇಬನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಹಿಂದುಗಳನ್ನು ಬೆದರಿಸಲು ಹಿಂದೂ ಮಹಿಳೆಯರು, ಹುಡುಗಿಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿತ್ತು, ಇಲ್ಲವೇ ದೇವಾಲಯ, ಮನೆಗಳ ಮೇಲೆ ದಾಳಿ ನಡೆಸಿ, ಭಯದ ವಾತಾವರಣ ನಿರ್ಮಿಸಿ ಹಿಂದೂಗಳನ್ನು ಬಾಂಗ್ಲಾದಿಂದ ಹೊರ ಹೋಗುವಂತೆ ಮಾಡಲಾಗುತ್ತಿತ್ತು. ಆದರೆ ಈಗ ಯಾವುದೇ ಆಸ್ತಿಯನ್ನು ಹೊಂದದ ಬಡ ಹಿಂದೂಗಳನ್ನು ನಿರ್ದಯವಾಗಿ ಹತ್ಯೆ ಮಾಡಲಾಗುತ್ತಿದ್ದು, ಹಿಂದೂಗಳಲ್ಲಿ ವಲಸೆ ಹೋಗುವ ಭೀತಿ ಎದುರಾಗಿದೆ ಎಂದು ದೇಬನಾಥ್ ಹೇಳಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದ ಕಾಜಲ್ ದೇಬನಾಥ್, ಬಾಂಗ್ಲಾದಲ್ಲಿರುವ  ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದರು.

SCROLL FOR NEXT