ಪರಮಹಂಸ ಯೋಗಾನಂದ 
ದೇಶ

'ಅವೇಕ್': ಪರಮಹಂಸ ಯೋಗಾನಂದರ ಜೀವನ ಚರಿತ್ರೆಯ ಚಿತ್ರ ಇಂದು ಬಿಡುಗಡೆ

ವಿಶ್ವಾದ್ಯಂತ ಹಲವು ಜನರ ಮನಗೆದ್ದು ಪ್ರಶಸ್ತಿ ಗೆದ್ದಿದ್ದ, ಯೋಗಾನಂದ ಅವರ ಜೀವನ ಚರಿತ್ರೆಯ ಸಾಕ್ಷ್ಯ ಚಿತ್ರ ಜೂ.17 ರಂದು ಬಿಡುಗಡೆಯಾಗಲಿದೆ.

ನವದೆಹಲಿ: ವಿಶ್ವಾದ್ಯಂತ ಹಲವು ಜನರ ಮನಗೆದ್ದು ಪ್ರಶಸ್ತಿ ಗೆದ್ದಿದ್ದ, ಯೋಗಾನಂದ ಅವರ ಜೀವನ ಚರಿತ್ರೆಯ ಸಾಕ್ಷ್ಯ ಚಿತ್ರ ಜೂ.17 ರಂದು ಬಿಡುಗಡೆಯಾಗಲಿದೆ.

ಅವೇಕ್ (ಎಚ್ಚರ) ಯೋಗಿ ಪರಮಹಂಸ ಯೋಗಾನಂದ ಅವರ ಜೀವನಚರಿತ್ರೆಯ ಕುರಿತಾದ ಸಾಕ್ಷ್ಯಚಿತ್ರವಾಗಿದ್ದು ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಸಾಕ್ಷ್ಯಚಿತ್ರಕ್ಕೆ ನಿರೂಪಣೆ ನೀಡಿದ್ದಾರೆ. ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲ್ಲಿದ್ದು, ಇದಕ್ಕೂ ಭಾರತದ ಯೋಗಿ ಪರಮಹಂಸ ಯೋಗಾನಂದ ಅವರ ಜೀವನಚರಿತ್ರೆ ಕುರಿತು ಚಿತ್ರ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ. 
ಮುಂಬೈ, ನವದೆಹಲಿ, ಕೋಲ್ಕತಾ, ಬೆಂಗಳೂರು, ಚಂಡೀಗಢ ಸೇರಿದಂತೆ ಭಾರತದ ಪ್ರಮುಖ ನಗರದಲ್ಲಿ ಅವೇಕ್ ಚಿತ್ರ ಬಿಡುಗಡೆಯಾಗುತ್ತಿದೆ. ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶಿತ ನಿರ್ದೇಶಕರಾದ ಪಾವೊಲಾ ಡಿ ಫ್ಲೋರಿಯೋ ಮತ್ತು ಲಿಸಾ ಲೀಮನ್ ಪರಮಹಂಸ ಯೋಗಾನಂದ ಅವರ ಜೀವನಚರಿತ್ರೆ ಚಿತ್ರವನ್ನು ನಿರ್ದೇಶನ ಮಾಡಿದ್ದು, ಸಾಕ್ಷ್ಯಚಿತ್ರದಲ್ಲಿ ಜಾರ್ಜ್ ಹ್ಯಾರಿಸನ್, ರವಿಶಂಕರ್, ಕೃಷ್ಣ ದಾಸ್ ಸೇರಿದಂತೆ ಹಲವು ಖ್ಯಾತ ನಾಮರನ್ನು ಸಂದರ್ಶನ ಮಾಡಲಾಗಿದೆ.
ಭಾರತಕ್ಕೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ. ಅವೇಕ್ ಚಿತ್ರವನ್ನು ಚಿತ್ರೀಕರಿಸುವುದಕ್ಕಾಗಿಯೇ ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದೆ. ಪರಮಹಂಸ ಯೋಗಾನಂದ ಅವರ ಬೋಧನೆಗಳು ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ನಿರ್ದೇಶಕ ಪಾವೊಲಾ ಡಿ ಫ್ಲೋರಿಯೋ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT