ಭಾರತದ ಸದಸ್ಯತ್ವಕ್ಕೆ ಬೆಂಬಲಿಸಲು ಎನ್ಎಸ್ ಜಿ ಯ 48 ಸದಸ್ಯ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ 
ದೇಶ

ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ: ಬೆಂಬಲಕ್ಕೆ 48 ಸದಸ್ಯ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ

ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧಿಸುತ್ತಿದ್ದರೂ, ಅಮೆರಿಕ ತನ್ನ ಬೆಂಬಲವನ್ನು ಮುಂದುವರೆಸಿದ್ದು, ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ 48 ಸದಸ್ಯ ರಾಷ್ಟ್ರಗಳಿಗೂ ಕರೆ ನೀಡಿದೆ.

ವಾಷಿಂಗ್ ಟನ್: ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ವಿರೋಧಿಸುತ್ತಿದ್ದರೂ, ಅಮೆರಿಕ ತನ್ನ ಬೆಂಬಲವನ್ನು ಮುಂದುವರೆಸಿದ್ದು, ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ 48 ಸದಸ್ಯ ರಾಷ್ಟ್ರಗಳಿಗೂ ಕರೆ ನೀಡಿದೆ.

ಮುಂದಿನ ವಾರ ನಡೆಯಲಿರುವ ಎನ್ ಎಸ್ ಜಿ ಸರ್ವಸದಸ್ಯರ ಸಭೆಯಲ್ಲಿ ಭಾರತದ ಸದಸ್ಯತ್ವ ವಿಚಾರ ಚರ್ಚೆಗೆ ಬರಲಿದ್ದು, ಭಾರತದ ಅರ್ಜಿಗೆ ಬೆಂಬಲ ನೀಡಬೇಕೆಂದು ಅಮೆರಿಕ ಎಲ್ಲಾ 48 ಸದಸ್ಯ ರಾಷ್ಟ್ರಗಳಿಗೂ ಒತ್ತಾಯಿಸಿದೆ ಎಂದು ಅಮೆರಿಕದ ಸರ್ಕಾರಿ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡಿದ್ದಾಗಲೂ ಅಮೆರಿಕ  ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸ್ಪಷ್ಟಪಡಿಸಿದ್ದರು.  ಇದಕ್ಕೂ ಮುನ್ನ ಭಾರತದ ಸದಸ್ಯತ್ವವನ್ನು ವಿರೋಧಿಸುತ್ತಿರುವ ರಾಷ್ಟ್ರಗಳಿಗೆ ಅಧಿಕೃತ ಪತ್ರವನ್ನು ಬರೆದಿದ್ದ ಅಮೆರಿಕ, ಭಾರತದ ಸೇರ್ಪಡೆಗೆ ಅಡ್ಡಿ ಉಂಟು ಮಾಡುವುದಿಲ್ಲ ಎಂಬ ನಿಬಂಧನೆಗೆ ಒಪ್ಪಿಕೊಳ್ಳಬೇಕೆಂದು ಹೇಳಿತ್ತು. 
ಭಾರತದ ಸದಸ್ಯತ್ವವನ್ನು ನಿರಂತರವಾಗಿ ವಿರೋಧಿಸುತ್ತಿರುವ ಚೀನಾ, ಭಾರತ ಅಣ್ವಸ್ತ್ರಗಳ ಪ್ರಸರಣ ನಿಷೇಧದ ಷರತ್ತುಗಳನ್ನು ಅನುಸರಿಸುವುದಾದರೆ ಮಾತ್ರ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ. ಎನ್ ಪಿಟಿ ಗೆ ಸಹಿ ಹಾಕದ ರಾಷ್ಟ್ರ ವಿಶ್ವಸಂಸ್ಥೆ ಪರಮಾಣು ಪೂರೈಕೆದಾರರ ಸಮೂಹಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಎನ್ಎಸ್ ಜಿ ಯ ಎಲ್ಲಾ ರಾಷ್ಟ್ರಗಳು ತೀರ್ಮಾನ ಕೈಗೊಂಡು, ಭಾರತ ಅಣ್ವಸ್ತ್ರ ಪ್ರಸರಣ ನಿಷೇಧದ ಷರತ್ತುಗಳನ್ನು ಭಾರತ ಪೂರೈಸಿದರೆ ಚೀನಾ ಭಾರತದ ಸದಸ್ಯತ್ವವನ್ನು ಬೆಂಬಲಿಸಲಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. ಚೀನಾದ ವಿರೋಧದ ಹೊರತಾಗಿಯೂ ಈಗ ಅಮೆರಿಕ ಭಾರತದ ಸದಸ್ಯತ್ವವನ್ನು ಸಭೆಯಲ್ಲಿ ಸ್ವಾಗತಿಸಬೇಕೆಂದು ಎಲ್ಲಾ 48 ಸದಸ್ಯ ರಾಷ್ಟ್ರಗಳಿಗೆ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!