ದೇಶ

ವಿಶ್ವ ಅಪ್ಪಂದಿರ ದಿನ: ಫಾದರ್ಸ್ ಡೇ ಗೆ ಗೂಗಲ್ ಡೂಡಲ್

Shilpa D

ನವದೆಹಲಿ: ಅಪ್ಪಂದಿರ ದಿನದ ಅಂಗವಾಗಿ ಗೂಗಲ್  ತನ್ನ ಮುಖಪುಟದಲ್ಲಿ ತಂದೆ ಹಾಗೂ ಮಗುವಿನ ಶೂ ಒಳಗೊಂಡ ಚಿತ್ರವನ್ನು ಪ್ರದರ್ಶಿಸುವ ಮೂಲಕ ಅಪ್ಪ ಹಾಗೂ ಮಕ್ಕಳ ನಡುವಿನ ಬಾಂಧವ್ಯದ ಗಾಢತೆಯನ್ನು ಚಿತ್ರಿಸಿದೆ.

ಇದಕ್ಕೆ ಗೂಗಲ್ ಮುಖ ಪರದೆಯಲ್ಲಿ ಕಾಣಿಸಿಕೊಳ್ಳುವ ಅಪ್ಪ ಹಾಗೂ ಮಗುವಿನ ಶೂ ಚಿತ್ರವೇ ಸಾಕ್ಷಿ. ತಂದೆಯ ಹೆಜ್ಜೆಯನ್ನು ಮಗು ಅನುಸರಿಸಲಿ ಎಂಬ ಸಂದೇಶ ಕೂಡ ಈ ಚಿತ್ರದಲ್ಲಿ ಹುದುಗಿದೆ.

ಬಾಲ್ಯದಲ್ಲಿನ ಅಪ್ಪನೊಂದಿಗಿನ ಒಡನಾಟ ನಂತರದ ದಿನಗಳಲ್ಲಿ ಕಡಿಮೆಯಾಗುತ್ತದೆ. ಮಕ್ಕಳು ಬದಲಾದರು ಅಪ್ಪ ಮಾತ್ರ ತನ್ನ ನಡೆಯನ್ನು ಎಂದೂ ಬದಲಿಸುವುದಿಲ್ಲ. ಮಕ್ಕಳನ್ನು ಸದಾ ಪ್ರೀತಿಸುತ್ತಿರುತ್ತಾನೆ, ಮಗುವಿನ ಶೇಯಸ್ಸಿಗಾಗಿ ಹಗಲಿರುಳು ದುಡಿಯುತ್ತಾನೆ. ಬಾಲ್ಯದಲ್ಲಿ ತಂದೆಯ ಪಾದಕ್ಕೆ ಎರಗುತ್ತಿದ್ದ ಮಕ್ಕಳು ಬೆಳೆದ ಮೇಲೆ ಕೂಡ ಪಾದಕ್ಕೆ ನಮಿಸುವುದನ್ನು ರೂಢಿಸಿಕೊಳ್ಳಲಿ, ತಂದೆಯ ಮಾರ್ಗವನ್ನು ಅನುಸರಿಸಲಿ ಎನ್ನುವ ಸಂದೇಶವನ್ನು ಗೂಗಲ್ ನೀಡಿದೆ.

ರಾಷ್ಟ್ರೀಯ ತಂದೆಯಂದಿರ ದಿನಾಚರಣೆ ಸಮಿತಿಯ ಪ್ರಕಾರ 1910ರಲ್ಲಿ ವಾಷಿಂಗ್ಟನ್​ನಲ್ಲಿ ಮೊದಲ ಬಾರಿಗೆ ತಂದೆಯ ದಿನಾಚರಣೆಯನ್ನು ಆಚರಿಸಲಾಗಿತ್ತು. ಜೂನ್ ತಿಂಗಳ ಮೂರನೇ ಭಾನುವಾರ ವಿಶ್ವ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಅಂತೆಯೇ ಈ ವರ್ಷ ಜೂನ್ 19 ರಂದು ಫಾದರ್ಸ್ ಡೇ ಆಚರಿಸಲಾಗುತ್ತಿದೆ.

SCROLL FOR NEXT