ದೇಶ

ಜಮ್ಮು ದೇವಾಲಯದಲ್ಲಿ ಧ್ವನಿ ವರ್ಧಕ ಬಳಕೆಗೆ ಮುಸ್ಲಿಮರಿಂದ ವಿರೋಧ: ಪ್ರಕ್ಷುಬ್ಧ ವಾತಾವರಣ

Srinivas Rao BV

ಜಮ್ಮು: ಜಮ್ಮು-ಕಾಶ್ಮೀರದ ಹಿಂದೂ ದೇವಾಲಯದಲ್ಲಿ ಧ್ವನಿ ವರ್ಧಕಗಳನ್ನು ಬಳಕೆ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೋಮು ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.

ವರದಿಗಳ ಪ್ರಕಾರ ಮುಸ್ಲಿಂ ಸಮುದಾಯದವರು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿರುವ ದೇವಾಲಯದಲ್ಲಿ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಣಾಮ ಪೂಂಚ್ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಯೊಬ್ಬರ ನೇತೃತ್ವದಲ್ಲಿ ಯುವಕರ ಗುಂಪೊಂದು ಹಿಂದೂ ದೇವಾಲಯದಲ್ಲಿ  ಧ್ವನಿವರ್ಧಕ ಬಳಕೆಯನ್ನು ತಡೆಯಲು ದೈಹಿಕವಾಗಿ ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ದೇವಾಲಯಕ್ಕೆ ಉದ್ರಿಕ್ತರ ಗುಂಪು ಪ್ರವೇಶಿಸುವುದನ್ನು ತಡೆಗಟ್ಟಲಾಗಿದೆ. ಇದರಿಂದ ಆಕ್ರೋಶಗೊಂಡ ಉದ್ರಿಕ್ತರ ಗುಂಪು ದೇವಾಲಯದ ವಿರುದ್ಧ ಘೋಷಣೆ ಕೂಗಿದೆ. ಪರಿಣಾಮ ಪೂಂಚ್ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

SCROLL FOR NEXT