ನವದೆಹಲಿ: ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ವಿರುದ್ಧ ಟ್ವಿಟರ್ ನಲ್ಲಿ ಕಿಡಿಕಾರಿದ್ದ ಸುಬ್ರಮಣಿಯನ್ ಸ್ವಾಮಿ ಅವರ ಹೇಳಿಕೆ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪಷ್ಟನೆ ನೀಡುವಂತೆ ವಿರೋಧ ಪಕ್ಷಗಳು ಶುಕ್ರವಾರ ಆಗ್ರಹಿಸಿವೆ.
ಈ ಕುರಿತಂತೆ ಮಾತನಾಡಿರು ಕಾಂಗ್ರೆಸ್ ವಕ್ತಾರ ಪಿ.ಎಲ್ ಪುಣ್ಯ ಅವರು, ಬಿಜೆಪಿ ನಾಯಕರೇ ತಮ್ಮ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಸ್ವಾಮಿ ಅವರ ಹೇಳಿಕೆಯನ್ನು ನಿಸ್ಸಂಶಯವಾಗಿ ಸಾಗಾಕಲು ಸಾಧ್ಯವಿಲ್ಲ. ಸ್ವಾಮಿ ಅವರ ಆರೋಪಗಳು ಸುಳ್ಳೋ ಅಥವಾ ಸತ್ಯವೋ ಎಂಬುದರ ಕುರಿತಂತೆ ಪ್ರಧಾನಮಂತ್ರಿ ಮಂತ್ರಿಯವರು ಕೂಡಲೇ ಸ್ಪಷ್ಟನೆ ನೀಡಬೇಕಿದೆ ಎಂದು ಹೇಳಿದ್ದಾರೆ.
ಆರೋಪಗಳು ವಿರೋಧಪಕ್ಷಗಳ ಕಡೆಯಿಂದ ಬರುತ್ತಿಲ್ಲ. ಸ್ವತಃ ಪ್ರಧಾನಿಯವರ ಪಕ್ಷದ ನಾಯಕರಿಂದಲೇ ಕೇಳಿಬರುತ್ತಿದ್ದಾರೆ. ಒಂದು ವೇಳೆ ಈ ಆರೋಪಗಳು ಆಧಾರ ರಹಿತ ಎಂದು ಪ್ರಧಾನಿಯವರು ಹೇಳುವುದೇ ಆದರೆ, ಸುಬ್ರಮಣಿಯನ್ ಸ್ವಾಮಿ ವಿರುದ್ಧ ಮೋದಿಯವರು ಕ್ರಮಕೈಗೊಳ್ಳಲಿ ಎಂದು ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ಸರ್ಕಾರ ಪರಿಶೀಲಿಸುತ್ತಿರುವ ಐವರು ಅಭ್ಯರ್ಥಿಗಳ ಪೈಕಿ ಭಾರತದ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರ ಹೆಸರೂ ಸಹ ಪ್ರಮುಖವಾಗಿ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಅರವಿಂದ ಸುಬ್ರಮಣಿಯನ್ ವಿರುದ್ದ ಟ್ವಿಟರ್ ನಲ್ಲಿ ಕಿಡಿಕಾರಿದ್ದ ಸುಬ್ರಮಣಿಯನ್ ಸ್ವಾಮಿ, ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಜಾರಿಗೊಳಿಸಿದ್ದ ಬೌದ್ಧಿಕ ಆಸ್ತಿ ಹಕ್ಕು (ಐಪಿಆರ್) ಮಾತ್ರವಲ್ಲದೆ, ಆಡಳಿತಾರೂಢ ಎನ್ ಡಿಎ ಸರ್ಕಾರದ ನೀತಿ ಮತ್ತು ಆಶಯಗಳನ್ನು ಅರವಿಂದ ಅವರು ವಿರೋಧಿಸಿದ್ದರು. ಅಮೆರಿಕದ ಔಷಧೀಯ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಳ್ಳಲು ಅಮೆರಿಕ ಭಾರತದ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಯಾರು ಹೇಳಿದ್ದು? ಇದನ್ನು ಹೇಳಿದ್ದು, ಅರವಿಂದ ಸುಬ್ರಮಣಿಯನ್ ಅವರೇ ಇಂತಹ ವ್ಯಕ್ತಿಗೆ ಅಧಿಕಾರ ನೀಡಬಾರದು ಎಂದು ವಾಗ್ದಾಳಿ ನಡೆಸಿದ್ದರು.
ಅರವಿಂದ ಸುಬ್ರಮಣಿಯನ್ ಅವರು ಅಮೆರಿಕ ನಾಗರೀಕನಾಗಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಅವರು ಗ್ರೀನ್ ಕಾರ್ಡ್ ಹೊಂದಿರುವುದಂತೂ ಸ್ಪಷ್ಟವಾಗಿ ಹೇಳುತ್ತೇನೆ. ಔಷಧೀಯ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಳ್ಳಲು ಅಮೆರಿಕ ಭಾರತದ ಅಭಿಪ್ರಾಯವನ್ನು ಕೇಳಲು ಬಯಸಿತ್ತು. ಆದರೆ, ಭಾರತ ಈ ವಿಚಾರದಲ್ಲಿ ಭಾರತ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದರು. ಇದಕ್ಕೆ ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯೂಟಿಒ) ಉತ್ತಮ ಪಾಠ ಕಲಿಸಿತ್ತು. ಇಂತಹ ವ್ಯಕ್ತಿಯನ್ನು ಆರ್ಥಿಕ ಸಲಹೆಗಾರನಾಗಿ ಹೇಗೆ ನೇಮಕ ಮಾಡಿಕೊಳ್ಳಲು ಸಾಧ್ಯ. ದೇಶದ ಆರ್ಥಿಕ ಅಭಿವೃದ್ಧಿ ಕುಸಿಯಲು ರಾಜನ್ ಹಾಗೂ ಅರವಿಂದ ಸುಬ್ರಮಣಿಯನ್ ಅವರು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.