ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಯೋಗ ಹಣದುಬ್ಬರದ ನೋವನ್ನು ಕಡಿಮೆ ಮಾಡುತ್ತಾ: ಮೋದಿಗೆ ಶಿವಸೇನೆ ಪ್ರಶ್ನೆ

ವಿಶ್ವ ಮಟ್ಟದಲ್ಲಿ ಯೋಗದ ಮಹತ್ವವನ್ನು ಮನವರಿಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ. ಯೋಗವು ಎಲ್ಲ ರೋಗಕ್ಕೂ ಪರಿಹಾರ ನೀಡುತ್ತದೆ ಎಂಬುದು...

ಯೋಗ ಮಾಡುತ್ತಿರುವ ಮೋದಿ
Vishwanath S
Updated On : 23 Jun 2016, 6:58 am

ಮುಂಬೈ: ವಿಶ್ವ ಮಟ್ಟದಲ್ಲಿ ಯೋಗದ ಮಹತ್ವವನ್ನು ಮನವರಿಕೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ. ಯೋಗವು ಎಲ್ಲ ರೋಗಕ್ಕೂ ಪರಿಹಾರ ನೀಡುತ್ತದೆ ಎಂಬುದು ಅಂತಾರಾಷ್ಟ್ರೀಯ ವೇದಿಕೆಯಲ್ಲೀಗ ಸಾಬೀತಾಗಿದ್ದು, ಅದರಿಂದ ನಮ್ಮನ್ನು ಕಾಡುತ್ತಿರುವ ಹಣದುಬ್ಬರ ಸಮಸ್ಯೆಗೆ ಪರಿಹಾರ ನೀಡುವುದೇ ಎಂದು ಪ್ರಶ್ನಿಸಿದೆ.

ಮೋದಿ ಅವರು ಯೋಗದಿಂದ ಜಗತ್ತಿನ 130 ರಾಷ್ಟ್ರಗಳು ಬಾಗಿ ಬಳುಕುವಂತೆ ಮಾಡಿದ್ದಾರೆ. ಅದೇ ರೀತಿ ಪಾಕಿಸ್ತಾನವನ್ನು ಮಲಗಿಸುವುದು ಯಾವಾಗ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ.

ಪಾಕಿಸ್ತಾನದ ಅಟ್ಟಹಾಸವನ್ನು ಸಂಪೂರ್ಣವಾಗಿ ಮಣಿಸಿ ಅದು ಶವಾಸನದ ಸ್ಥಿತಿ ತಲುಪಲು ಯೋಗಕ್ಕಿಂತ ಶಸ್ತ್ರಾಸ್ತ್ರವೇ ಸೂಕ್ತ ಸಾಧನ. ನರೇಂದ್ರ ಮೋದಿ ಅವರು ಈ ಪ್ರಯೋಗಕ್ಕೆ ಮುಂದಾಗಲಿ ಎಂದು ಶಿವಸೇನೆ ಹೇಳಿದೆ.

ಯೋಗ ಎಂದೂ ಜಾತಿ-ಧರ್ಮದ ಸೂಚಕವಲ್ಲ. ಇದು ಆರೋಗ್ಯದ ಸೂತ್ರ ಎಂಬುದನ್ನು ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಲು ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments