ಉಗ್ರ ಹಫೀಜ್ ಸಯೀದ್ 
ದೇಶ

ಉಗ್ರ ಹಫೀಜ್ ಸಯೀದ್ ಅಳಿಯ ಪ್ಯಾಂಪೋರ್ ಉಗ್ರ ದಾಳಿಯ ಮಾಸ್ಟರ್ ಮೈಂಡ್: ವರದಿ

ಜಮ್ಮು-ಕಾಶ್ಮೀರದ ಪುಲ್ವಾಮಾದ ಪ್ಯಾಂಪೋರ್ ನಲ್ಲಿ ಜೂನ್.26 ರಂದು ನಡೆದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ನ ಅಳಿಯ ಎಂಬ ವರದಿ ಪ್ರಕಟವಾಗಿದೆ.

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದ ಪ್ಯಾಂಪೋರ್ ನಲ್ಲಿ ಜೂನ್.26 ರಂದು ನಡೆದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ನ ಅಳಿಯ ಎಂಬ ವರದಿ ಪ್ರಕಟವಾಗಿದೆ.

ಹಪೀಜ್ ಸಯೀದ್  ನ ಅಳಿಯ ಖಲಿದ್ ವಾಲಿದ್ ಪ್ಯಾಂಪೋರ್ ದಾಳಿಯ ರೂಪುರೇಷೆಗಳನ್ನು ಸಿದ್ಧಪಡಿಸಿದ್ದರೆ ಆತನ ಸಹಾಯಕರಾಗಿದ್ದ ಹಂಜಾಲಾ ಅದ್ನಾನ್ ಹಾಗೂ ಸಾಜಿದ್ ಜಾಟ್ ಉಗ್ರ ದಾಳಿಯನ್ನು ನಡೆಸಿದ್ದಾರೆ ಎಂದು ಶಂಕಿಸಲಾಗಿದೆ. ಸಿಆರ್ ಪಿಎಫ್ ಮೀಸಲು ಪಡೆ ಮೇಲೆ ದಾಳಿ ನಡೆಸಲು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ದಕ್ಷಿಣ ಕಾಶ್ಮೀರದ ಕಮಾಂಡರ್ ಅಬು ದುಜಾನ ಸಹಾಯ ಮಾಡಿದ್ದ ಎಂಬ ಆರೋಪವೂ ಕೇಳಿಬಂದಿದೆ.

ಇನ್ನು ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇರುವುದರ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ಸ್ಪಷ್ಟ ದಾಖಲೆಗಳನ್ನು ಸಂಗ್ರಹಿಸಿದ್ದು, ಉಗ್ರ ಹಪೀಜ್ ಸಯೀದ್ ಭಾರತದ ವಿರುದ್ಧ ದಾಳಿ ನಡೆಸಲು ತನ್ನ ಅಳಿಯ ಖಲಿದ್ ವಾಲಿದ್ ನ್ನು ತಯಾರುಗೊಳಿಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ ಭಾರತದ ಮೇಲೆ ದಾಳಿ ನಡೆಸಲು ಲಷ್ಕರ್ ಉಗ್ರ ಸಂಘಟನೆಯೊಂದಿಗೂ ಜೆಯುಡಿ ಉಗ್ರ ಸಂಘಟನೆ ಕೈ ಜೋಡಿಸಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ