ಸಾಂದರ್ಭಿಕ ಚಿತ್ರ 
ದೇಶ

ದೇಶದಲ್ಲೇ ಅತಿ ಹೆಚ್ಚು ಫ್ಯಾಕ್ಟರಿ ಹೊಂದಿರುವ ರಾಜ್ಯ ತಮಿಳುನಾಡು

ದೇಶದಲ್ಲೇ ಅತಿ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ಹಾಗೂ ಅತಿ ಹೆಚ್ಚು ದೊಡ್ಡ ಪ್ರಮಾಣದ ಉದ್ಯೋಗಿಗಳನ್ನು ಹೋಂದಿರುವ ರಾಜ್ಯ ಎಂಬ ಖ್ಯಾತಿಗೆ ತಮಿಳುನಾಡು..

ಚೆನ್ನೈ: ದೇಶದಲ್ಲೇ ಅತಿ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ಹಾಗೂ ಅತಿ ಹೆಚ್ಚು ದೊಡ್ಡ ಪ್ರಮಾಣದ ಉದ್ಯೋಗಿಗಳನ್ನು ಹೋಂದಿರುವ ರಾಜ್ಯ ಎಂಬ ಖ್ಯಾತಿಗೆ ತಮಿಳುನಾಡು ಪಾತ್ರವಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ 2014ನೇ ಇಸವಿಯ ಆರ್ಥಿಕ ವರ್ಷದ ಪ್ರಕಾರ ಈ ಮಾಹಿತಿ ತಿಳಿದು ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯ ಮಟ್ಟದ ಅಂಕಿ ಅಂಶಗಳನ್ನ ಪ್ರಕಟಿಸಿದೆ.

1991 ರಿಂದ 2014 ರ ವರೆಗೂ ಗುಜರಾತ್ ಮೊದಲ ಸ್ಥಾನದಲ್ಲಿತ್ತು. ಗುಜರಾತ್, 5.4 ಲಕ್ಷ ಕೋಟಿ, ಮಹಾರಾಷ್ಟ್ರ4.8 ಲಕ್ಷ ಕೋಟಿ ಹಾಗೂ ತಮಿಳುನಾಡು 3.8 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಿ ಮೂರನೇ ಸ್ಥಾನದಲ್ಲಿತ್ತು. ಒಡಿಸ್ಸಾ ಮತ್ತು ಉತ್ತರ ಪ್ರದೇಶಗಳು ಬಂಡವಾಳ ಹೂಡಿಕೆಯಲ್ಲಿ 4 ಮತ್ತು 5 ನೇ ಸ್ಥಾನದಲ್ಲಿದ್ದವು.

ದೇಶಾದ್ಯಂತ ಸುಮಾರು 2.24 ಲಕ್ಷ ಕಾರ್ಖಾನೆಗಳಿದ್ದರೇ, ತಮಿಳುನಾಡು ರಾಜ್ಯ ಒಂದರಲ್ಲೇ 37,378 ಕಾರ್ಖಾನೆಗಳು ಸ್ಥಾಪಿತವಾಗಿವೆ. ಜೊತೆಗೆ ತಮಿಳುನಾಡು ಒಂದರಲ್ಲೇ 16 ಲಕ್ಷ, ಅಂದರೇ ಶೇ.16 ರಷ್ಟು ಉದ್ಯೋಗಿಗಳಿದ್ದಾರೆ.

1999 ರಿಂದ ಮಹಾರಾಷ್ಟ್ರ ರಾಜ್ಯ ಗಳಿಸಿದ್ದ ಸ್ಥಾನವನ್ನ ತಮಿಳುನಾಡು ಪಡೆದುಕೊಂಡಿದೆ. ಕಳೆದ 10 ವರ್ಷಗಳಿಂದ ತಮಿಳುನಾಡಿನಲ್ಲಿ ಶೇ.22 ರಷ್ಟು ಕಾರ್ಖಾನೆಗಳು ಬೆಳದಿವೆ, ಆದರೆ ಮಹಾರಾಷ್ಟ್ರದಲ್ಲಿ ಶೇ.54ರಷ್ಟು ಮಾತ್ರ ಬೆಳವಣಿಗೆಯಾಗಿದೆ.ತಮಿಳುನಾಡಿನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹೆಚ್ಚು ಅಭಿವೃದ್ಧಿ ಹೊಂದಿವೆ ಎಂದು ಆರ್ ಬಿಐ ಪ್ರಕಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಭೀಕರ ಹಿಟ್‌ ಅಂಡ್ ರನ್‌; ಟೀ ಕುಡಿಯುತ್ತಾ ಬೈಕ್ ಮೇಲೆ ಕುಳಿತಿದ್ದವನಿಗೆ ಶಾಕ್ ಕೊಟ್ಟ ಕಾರು, ಗಾಳಿಯಲ್ಲಿ ಹಾರಿದ ವ್ಯಕ್ತಿ! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ