ದೇಶ

ಮುಂಬೈ: ಔಷಧಿ ಅಂಗಡಿಯಲ್ಲಿ ಬೆಂಕಿ; ಸಾವಿನ ಸಂಖ್ಯೆ 9ಕ್ಕೆ ಏರಿಕೆ

Sumana Upadhyaya

ಮುಂಬೈ: ಉಪನಗರ ಅಂದೇರಿ ಪ್ರದೇಶದ ಚವಲ್ ಎಂಬಲ್ಲಿ ಮೆಡಿಕಲ್ ಸ್ಟೋರ್ ವೊಂದರಲ್ಲಿ ಗುರುವಾರ ಬೆಳಗ್ಗೆ ಬೆಂಕಿ ಹತ್ತಿ ಉರಿದು ಸಾವನ್ನಪ್ಪಿದವರ ಸಂಖ್ಯೆ 9ಕ್ಕೇರಿದೆ. ಅವರಲ್ಲಿ 3 ತಿಂಗಳ ಮಗು ಸೇರಿದಂತೆ ಐವರು ಮಕ್ಕಳು ಸೇರಿದ್ದಾರೆ.

 ಬೆಳಗ್ಗೆ 5.15ರ ಸುಮಾರಿಗೆ ಅಂದೇರಿ ಉಪನಗರದ ಜುಹಿ ಗಲ್ಲಿಯಲ್ಲಿರುವ ವಾಫಾ ಮೆಡಿಕಲ್ ಶಾಪ್ ವೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿ ಉರಿಯತೊಡಗಿತು. ಆಗ ಕಟ್ಟಡದೊಳಗೆ ನಿದ್ದೆ ಮಾಡುತ್ತಿದ್ದ 8 ಮಂದಿ ಸಾವನ್ನಪ್ಪಿದ್ದು, ಒಬ್ಬರಿಗೆ ಗಾಯವಾಗಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಅಶೋಕ್ ದುದೆ ತಿಳಿಸಿದ್ದಾರೆ.

ಆರಂಭದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದರು, ನಂತರ ತೀವ್ರವಾಗಿ ಸುಟ್ಟುಹೋಗಿದ್ದ ಮಹಿಳೆ ಆಸ್ಪತ್ರೆಯಲ್ಲಿ ಅಸುನೀಗಿದರು. ಘಟನೆಯಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿಗೂ ಗಾಯಗಳಾಗಿವೆ.

ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರು ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.

ಮಾಹಿತಿ ಬಂದ ಕೂಡಲೇ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿತು. ಔಷಧಾಲಯದಲ್ಲಿ ಇಟ್ಟಿದ್ದ ಸಿಲೆಂಡರ್ ಸೋರಿಕೆಯಾಗಿ ಬೆಂಕಿ ಸ್ಪೋಟವುಂಟಾಗಿರಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡದ ನೆಲ ಮಹಡಿಯಲ್ಲಿರುವ ಮೆಡಿಕಲ್ ಶಾಪ್ ನಲ್ಲಿರುವ ವಿದ್ಯುತ್ ಅನುಸ್ಥಾಪನೆಗೆ ಮೊದಲು ಬೆಂಕಿ ಹತ್ತಿಕೊಂಡು ನಂತರ ಮೊದಲ ಮತ್ತು ಎರಡನೇ ಮಹಡಿಗೆ ಪಸರಿಸಿತು. ಕಟ್ಟಡದಲ್ಲಿ ಸುಮಾರು 17ರಿಂದ 18 ಮಂದಿ ವಾಸಿಸುತ್ತಿದ್ದಾರೆ.

SCROLL FOR NEXT