ಹೈದರಾಬಾದ್: ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ಸೆವೆನ್ ಸ್ಟಾರ್ ಮಹಾರಾಜ ಎಕ್ಸ್ ಪ್ರೆಸ್ ರೈಲು ಸದ್ಯದಲ್ಲಿಯೇ ತೆಲಂಗಾಣ ರಾಜ್ಯದಲ್ಲಿ ಸಂಚಾರ ಆರಂಭಿಸಲಿದೆ.
ಈ ಐಷಾರಾಮಿ ರೈಲು ತೆಲಂಗಾಣ ಮೂಲಕ ಕೊಂಕಣದಿಂದ ಕರ್ನಾಟಕಕ್ಕೆ ಹಾಗೂ ಕೇರಳ ಮತ್ತು ತಮಿಳುನಾಡಿಗೆ ಸಂಚರಿಸುವ ಬಗ್ಗೆ ಪ್ರಸ್ತಾವ ಕುರಿತು ತೆಲಂಗಾಣ ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ರೈಲ್ವೆ ಇಲಾಖೆ ಅಧಿಕಾರಿಗಳು ನಿನ್ನೆ ಅಧಿಕೃತವಾಗಿ ಚರ್ಚೆ ನಡೆಸಿದರು.
ಮಹಾರಾಜ ಎಕ್ಸ್ ಪ್ರೆಸ್ ರೈಲು ತೆಲಂಗಾಣ ರಾಜ್ಯದಲ್ಲಿ ಸಿಕಂದರಾಬಾದ್ ಮತ್ತು ಕಜಿಪೇಟ್ ಜಂಕ್ಷನ್ ನಲ್ಲಿ ನಿಲ್ಲಲಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷ ಪಿ.ರಾಮುಲು ಅವರು ಸಲ್ಲಿಸಿದ ಬೇಡಿಕೆಗೆ ಸಿಕಂದರಾಬಾದ್ ನಿಂದ ಶಿರಡಿ, ಗೋವಾ, ತಿರುಪತಿಗೆ ಬಸ್ ದರದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಬಗ್ಗೆ ಒಪ್ಪಂದ ಮಾಡಿಕೊಂಡರು.