ಸಂಸದೆ ಸಾಧ್ವಿ ಪ್ರಾಚಿ ವಿಎಚ್ಪಿ ನಾಯಕಿಯಲ್ಲ: ವಿಶ್ವ ಹಿಂದು ಪರಿಷತ್
ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ವಿಶ್ವಹಿಂದೂ ಪರಿಷತ್ನ ನಾಯಕಿಯಲ್ಲ ಅಥವಾ ವಕ್ತಾರಲ್ಲ, ಸಂಘಟನೆಯ ಪದಾಧಿಕಾರಿಯೂ ಅಲ್ಲ ಎಂದು ವಿಎಚ್ಪಿ ಸ್ಪಷ್ಟನೆ ನೀಡಿದೆ.
ನವದೆಹಲಿ: ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ವಿಶ್ವಹಿಂದೂ ಪರಿಷತ್ನ ನಾಯಕಿಯಲ್ಲ ಅಥವಾ ವಕ್ತಾರಲ್ಲ, ಸಂಘಟನೆಯ ಪದಾಧಿಕಾರಿಯೂ ಅಲ್ಲ ಎಂದು ವಿಎಚ್ಪಿ ಸ್ಪಷ್ಟನೆ ನೀಡಿದೆ .
ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿ ವಿಶ್ವಹಿಂದೂ ಪರಿಷತ್ನ ನಾಯಕಿಯಲ್ಲ ಅಥವಾ ವಕ್ತಾರಳಲ್ಲ, ಸಂಘಟನೆಯ ಪದಾಧಿಕಾರಿಯೂ ಅಲ್ಲ ಎಂದು ವಿಎಚ್ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಧ್ವಿ ಪ್ರಾಚಿ ರಾಜಕೀಯದಲ್ಲಿ ಬಿಜಿಯಾಗಿದ್ದು, ಹಿಂದೆ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದು ಜೈನ್ ತಿಳಿಸಿದ್ದಾರೆ.ಸಾಧ್ವಿ ಪ್ರಾಚಿ ಬಿಜೆಪಿ ಪಕ್ಷದ ಚಿಹ್ನೆಯ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ರಾಜಕೀಯದಲ್ಲಿರುವುದರಿಂದ ವಿಎಚ್ಪಿ ಪದಾಧಿಕಾರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದೆ ಸಾಧ್ವಿ ಪ್ರಾಚಿಯನ್ನು ವಿಶ್ವ ಹಿಂದೂ ಪರಿಷತ್ ನಾಯಕಿ ಎಂದು ಕರೆಯಬಾರದು ಎಂದು ವಿಎಚ್ಪಿ ಜಂಟಿ ಕಾರ್ಯದರ್ಶಿ ಸುರೇಂದ್ರ ಜೈನ್ ಸಲಹೆ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.