ನವದೆಹಲಿ: ಜೆಎನ್ ಯು ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೆಯ ಕಾಟ್ಜು ಮಾತನಾಡಿದ್ದು, ಜೆಎನ್ ಯು ಪ್ರಾರಂಭವಾದಾಗಿನಿಂದ ಕ್ರಿಯಾತ್ಮಕ, ವೈಜ್ಞಾನಿಕ ವಿಷಯಗಳು ಹೊರಬಂದಿಲ್ಲ ಎಂದು ಹೇಳಿದ್ದಾರೆ.
ದೇಶವೀರೋಧಿ ಘೋಷಣೆ ಕೂಗಿರುವ ಆರೋಪಕ್ಕೆ ಗುರಿಯಾಗಿರುವ ಜೆಎನ್ ಯು ವಿದ್ಯಾರ್ಥಿ ಸಂಘಟನೆ ನಾಯಕ ಕನ್ಹಯ್ಯ ಕುಮಾರ್ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಕಾಟ್ಜು, ಭಾರತದಿಂದ ಸ್ವಾತಂತ್ರ್ಯ ಕೇಳುವವರಿಗೆ ಅದರ ಪರಿಣಾಮಗಳ ಬಗ್ಗೆ ಅರಿವಿದೆಯೇ ಎಂದು ಕಾಟ್ಜು ಪ್ರಶ್ನಿಸಿದ್ದಾರೆ.
ಕನ್ಹಯ್ಯ ಕುಮಾರ್ ವೈಜ್ಞಾನಿಕ ವಿಚಾರಗಳಿಲ್ಲದ ಧೈರ್ಯವಂತ ಹುಡುಗ ಎಂದು ಫೇಸ್ ಬುಕ್, ಟ್ವಿಟರ್ ಗಳಲ್ಲಿ ಬರೆದಿರುವ ಕಾಟ್ಜು ಅಭಿಪ್ರಾಯಪಟ್ಟಿದ್ದಾರೆ. ಜನವರಿಯಲ್ಲಿ ಫೇಸ್ ಬುಕ್ ತೊರೆದಿದ್ದ ಕಾಟ್ಜು ಜೆಎನ್ ಯು ವಿವಾದದ ಮೂಲಕ ಮತ್ತೆ ಫೇಸ್ ಬುಕ್ ಗೆ ವಾಪಸ್ ಆಗಿದ್ದಾರೆ.