ಪ್ರಧಾನಿಯ ಮಾತುಗಾರಿಕೆ, ಮಾರ್ಕೆಟಿಂಗ್ ಚೆನ್ನಾಗಿರುತ್ತದೆ ಆದರೆ ಭಾಷಣಗಳಲ್ಲಿ ಸತ್ವವಿರುವುದಿಲ್ಲ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಕೆಟಿಂಗ್ ಕೌಶಲ್ಯ ಹಾಗೂ ಮಾತುಗಾರಿಗೆ ಚೆನ್ನಾಗಿದೆ. ಆದರೆ ಅವರ ಭಾಷಣಗಳಲ್ಲಿ ಸತ್ವವಿರುವುದಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮುಂದುವರೆಸಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಮೋದಿ ಅವರ ಮಾರ್ಕೆಟಿಂಗ್ ಕೌಶಲ್ಯ ಹಾಗೂ ಮಾತುಗಾರಿಗೆ ಚೆನ್ನಾಗಿದೆ. ಆದರೆ ಅವರ ಭಾಷಣಗಳಲ್ಲಿ ಸತ್ವವಿರುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ ನೀಡಿ ಹಲವು ಭರವಸೆಗಳನ್ನು ನೀಡಿದ್ದರು, ಆದರೆ ಈ ಪೈಕಿ ಯಾವುದೂ ಈಡೇರಿಲ್ಲ. ನಂತರ ಅಸ್ಸಾಂ ಗೆ ಭೇಟಿ ನೀಡಿ ಉತ್ತಮ ಭಾಷಣ ಮಾಡಿದ್ದರು, ಆಗಲೂ ಹಲವು ಭರವಸೆಗಳನ್ನು ನೀಡಿದ್ದರು ಅವೆಲ್ಲವೂ ಪೊಳ್ಳು ಭರವಸೆಗಳು ಎಂಬುದು ಸಾಬೀತಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಅಸ್ಸಾಂ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ನಡೆಸುತ್ತಿದ್ದಾರೆ. ಅಸ್ಸಾಂ ನಲ್ಲಿ ಕಳೆದ 15 ವರ್ಷಗಳಿಂದ ಶಾಂತಿ ನೆಲೆಸುವಂತೆ ಮಾಡಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ, ನಾವು ಬಡವರಿಗೆ ಸಹಾಯ ಮಾಡಲು ಇದ್ದರೆ, ಕೇಂದ್ರದಲ್ಲಿರುವ ಸರ್ಕಾರ ಉದ್ಯಮಿಗಳಿಗೆ ಸಹಾಯ ಮಾಡುತ್ತಿದೆ ಎಂದು ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.