ಸಾಂದರ್ಭಿಕ ಚಿತ್ರ 
ದೇಶ

ಮೃತದೇಹವನ್ನು ನದಿಗೆ ಎಸೆದ ಬೇಜಾಬ್ದಾರಿಯುತ ಪೊಲೀಸರು

ಅನಾಮಧೇಯ ಮೃತದೇಹ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲಕ್ಕೆ ಸಿಲುಕಿದ್ದ ಪೊಲೀಸರು ವಿಚಾರಣೆ ನಡೆಯುವ ಬದಲು ಗೊಂದಲ ನಿವಾರಣೆಗೆ ಮೃತದೇಹವನ್ನೇ ನದಿಗೆ ಎಸೆದಿರುವ ಘಟನೆಯೊಂದು ಲಖನೌನಲ್ಲಿ ನಡೆದಿರುವುದಾಗಿ ವರದಿಯಾಗಿದೆ...

ಲಖನೌ: ಅನಾಮಧೇಯ ಮೃತದೇಹ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲಕ್ಕೆ ಸಿಲುಕಿದ್ದ ಪೊಲೀಸರು ವಿಚಾರಣೆ ನಡೆಯುವ ಬದಲು ಗೊಂದಲ ನಿವಾರಣೆಗೆ ಮೃತದೇಹವನ್ನೇ ನದಿಗೆ ಎಸೆದಿರುವ ಘಟನೆಯೊಂದು ಲಖನೌನಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಕಳೆದ ಭಾನುವಾರ ರಾತ್ರಿ ಲಖನೌವಿನ ಹಜ್ರತ್ಘಂಜ್ ಹಾಗೂ ಮಹಾನಗರ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದ ಮಧ್ಯೆ ಅನಾಮಧೇಯ ಮೃತದೇಹವೊಂದು ಪತ್ತೆಯಾಗಿತ್ತು. ಮೃತ ದೇಹವನ್ನು ಕಂಡ ಪೊಲೀಸರು ಪ್ರಕರಣ ಯಾವ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಗೊಂದಲಕ್ಕೆ ಸಿಲುಕಿಕೊಂಡರು.

ಇದರಿಂದಾಗಿ ತಲೆಕೆಡಿಸಿಕೊಳ್ಳುವುದು ಯಾಕೆ ಎಂಬ ಕಾರಣಕ್ಕೋ ಏನೋ, ತನಿಖೆ ನಡೆಸುವ ಬದಲು ಗೊಂದಲ, ಗೋಜಲುಗಳೇ ಬೇಡವೆಂದು ಎರಡೂ ಠಾಣೆಯ ಪೊಲೀಸರು ಅಲ್ಲಿನ ಮೀನುಗಾರರಿಗೆ ಮೃತದೇಹವನ್ನು ಗೋಮತಿ ನದಿತೀರಕ್ಕೆ ಎಸೆಯುವಂತೆ ತಿಳಿಸಿದ್ದಾರೆ. ಇದರಂತೆ ಮೀನುಗಾರರು ಮೃತದೇಹವನ್ನು ನದಿ ತೀರಕ್ಕೆ ಎಸೆಯುತ್ತಿರುವ ಫೋಟೋಗಳೀಗ ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!