ದೇಶ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ

Sumana Upadhyaya

ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ವಿರುದ್ಧ ಅಪರಾಧ ಪಿತೂರಿ ಆರೋಪಗಳಿಂದ ಮುಕ್ತಗೊಳಿಸಿ ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ ದಾಖಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಲಿದೆ.

ಇಲ್ಲಿ ಎರಡು ಕೇಸುಗಳ ವಿಚಾರಣೆ ನಡೆಯಲಿದೆ, ಒಂದು ಅಡ್ವಾಣಿಯವರ ವಿರುದ್ಧ ಹಾಗೂ ಇನ್ನೊಂದು 1992, ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ವೇಳೆ ರಾಮ ಕಥಾ ಕುಂಜ ವೇದಿಕೆಯಲ್ಲಿದ್ದ ಕರಸೇವಕರ ವಿರುದ್ಧ ದಾಖಲಿಸಿದ ಕೇಸಿನ ವಿಚಾರಣೆ.
 
ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ(ವರ್ಗಗಳ ನಡುವೆ ದ್ವೇಷ ಬಿತ್ತುವಿಕೆ), ಸೆಕ್ಷನ್ 153ಬಿ(ರಾಷ್ಟ್ರೀಯ ಸಮಗ್ರತೆಗೆ ಧಕ್ಕೆಯುಂಟುಮಾಡಿದ್ದು) ಮತ್ತು ಸೆಕ್ಷನ್ 505ರ(ತಪ್ಪು ಹೇಳಿಕೆಗಳನ್ನು, ವದಂತಿಗಳನ್ನು ಹಬ್ಬಿಸಿ ದಂಗೆಯನ್ನುಂಟುಮಾಡುವುದು ಅಥವಾ ಸಾರ್ವಜನಿಕ ಶಾಂತಿ ವಿಚಲಿತಗೊಳಿಸುವುದು) ಅಡಿಯಲ್ಲಿ ಅಡ್ವಾಣಿ ಮತ್ತು ಇತರ 20 ಮಂದಿ ವಿರುದ್ಧ ಕೇಸು ದಾಖಲಾಗಿದೆ.

SCROLL FOR NEXT