ನವದೆಹಲಿ : ಜೂನ್ 18 ರಿಂದ ಭಾರತೀಯ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಫೈಟರ್ ಪೈಲಟ್‌ಗಳು ನಾಲ್ಕು ವರ್ಷಗಳ ತರಬೇತಿ ವೇಳೆ ಗರ್ಭ ಧರಿಸುವಂತಿಲ್ಲ ಎಂದು ಭಾರತೀಯ ವಾಯುಸೇನೆ ತಿಳಿಸಿದೆ.
ಈ ಸಂಬಂಧ ಐಎಎಫ್ ಉಪ ಮುಖ್ಯ ಏರ್ ಮಾರ್ಷಲ್ ಬಿಎಸ್ ದನೊವಾ ಮಾಹಿತಿ ನೀಡಿದ್ದು, ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್‌ಗಳಾಗಿ ಮೂವರು ಮಹಿಳೆಯರಿಗೆ ಹೈದರಾಬಾದ್ ಬಳಿಯ ಐಎಎಫ್ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಪುರುಷರಂತೆ ಇವರಿಗೂ ತರಬೇತಿ ನೀಡಲಾಗುತ್ತಿದ್ದು, ದೈಹಿಕ ಹಾಗೂ ಮಾನಸಿಕ ದೃಢತೆಗಾಗಿ ಇವರು ಗರ್ಭ ಧರಿಸದಂತೆ ಹೇಳಲಾಗಿದೆ.
ಮಾರ್ಚ್ 8 ಮಹಿಳಾ ದಿನಾಚರಣೆಯಂದು ವಾಯು ಸೇನೆಗೆ ಮಹಿಳಾ ಪೈಲಟ್ ಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಅನೂಪ್ ರಾಹಾ ಹೇಳಿಕೆ ನೀಡಿದ್ದರು.