ಭರತ್ ಪುರ್: 59 ವರ್ಷದ ರಾಜಸ್ತಾನ ಮೇಯರ್ ಪ್ರಸಕ್ತ ವರ್ಷ ನಡೆಯುತ್ತಿರುವ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ.
ಪರೀಕ್ಷಾ ಕೊಠಡಿಗೆ ಮೇಯರ್ ಬಂದು ಕುಳಿತಿದ್ದು ವಿದ್ಯಾರ್ಥಿಗಳಿಗೆ ಕೆಲ ಕಾಲ ಆಶ್ಚರ್ಯ ಮೂಡಿಸಿತು. ಮಯೂರ್ ಶಿವ ಸಿಂಗ್ 1971 ರಲ್ಲಿ ಶಾಲೆ ಬಿಟ್ಟಿದ್ದರು. ಹೀಗಾಗಿ ಮತ್ತೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿರುವ ಮಯೂರ್ ಶಿವಸಿಂಗ್ ಕೊನೇಪಕ್ಷ 12 ನೇ ತರಗತಿ ಪಾಸು ಮಾಡಬೇಕೆಂದು ಪಣ ತೊಟ್ಟಿದ್ದಾರೆ.
ಗುರುವಾರ ರಾಜಸ್ತಾನ ಪರೀಕ್ಷಾ ಮಂಡಳಿ ನಡೆಸಿದ ಆಂಗ್ಲ ಭಾಷೆ ಪರೀಕ್ಷೆ ಬರೆದಿರುವ ಸಿಂಗ್ ಮುಂದಿನ ವಿಷಯದ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.