ಬೆಂಗಳೂರು: ಬಿಸಿಎ ಅಂತಿಮ ವರ್ಷ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೈಯಪ್ಪನಹಳ್ಳಿ ಸಮೀಪದ ಕಗ್ಗದಾಸನಪುರದಲ್ಲಿ ನಡೆದಿದೆ.
ಸೇವಂತಿ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮುರುಗನ್ ಹಾಗೂ ಅಜಲಾಕ್ಷಿ ದಂಪತಿಯ ಮಗಳು. ಖಾಸಗಿ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಮುರುಗನ್ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಮುರುಗನ್ ಕೆಲಸಕ್ಕೆ ಹೋಗಿದ್ದರು, ಲಕ್ಷ್ಮೀ ಅವರು ಕೂಡ ಮನೆಗೆಲಸಕ್ಕೆ ತೆರಳಿದ್ದರು.
ಈ ವೇಳೆ ಸೇವಂತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ 4.30 ಸುಮಾರಿಗೆ ತಾಯಿ ಮನೆಗೆ ಬಂದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.