ದೇಶ

ಆರ್‌ಎಸ್‌ಎಸ್'ನ್ನು ಇಸಿಸ್ ಗೆ ಹೋಲಿಸಿಲ್ಲ: ಗುಲಾಂ ನಬಿ ಆಜಾದ್

Manjula VN

ನವದೆಹಲಿ: ಆರ್ ಎಸ್ಎಸ್' ಇಸಿಸ್ ಗೆ ಹೋಲಿಕೆ ಮಾಡಿದ್ದ ಗುಲಾಂ ನಬಿ ಆಜಾದ್ ಅವರ ಭಾಷಣ ಸೋಮವಾರ ನಡೆಯುತ್ತಿರುವ ಕಲಾಪದಲ್ಲಿ ಗದ್ದಲವನ್ನುಂಟು ಮಾಡಿದೆ.
ಗುಲಾಂ ನಬಿ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕರು, ಹೇಳಿಕೆ ಸಂಬಂಧ ಗುಲಾಂ ನಬಿ ಆಜಾದ್ ಅವರು ಕೂಡಲೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.

ಇದಕ್ಕುತ್ತರಿಸಿ ಆಜಾದ್ ಅವರು, ಉತ್ತರ ಕೇಳುವ ತಾಳ್ಮೆಯನ್ನು ತೋರಿಸಿ ಎಂದು ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದರು. ನಾನು ಆರ್'ಎಸ್ಎಸ್ ನ್ನು ಇಸಿಸ್ ಉಗ್ರ ಸಂಘಟನೆಗೆ ಹೋಲಿಕೆ ಮಾಡಿಯೇ ಇಲ್ಲ. ನನ್ನ ಭಾಷಣವನ್ನು ಮಾಧ್ಯಮಗಳಲ್ಲಿ ತಿರುಚಲಾಗಿದೆ ಎಂದು ಆರೋಪಿಸಿದರು.

ಬೇಕಿದ್ದರೆ ನನ್ನ ಭಾಷಣದ ಸಿಡಿ ಇದೆ. ಭಾಷಣದ ಪ್ರತಿ ನನ್ನ ಬಳಿಯಿದೆ. ಗದ್ದಲವುಂಟು ಮಾಡುವ ಮೊದಲು ತಾಳ್ಮೆಯಿಂದ ನನ್ನ ಭಾಷಣವನ್ನು ವೀಕ್ಷಿಸಿ. ಒಂದು ವೇಳೆ ನಾನು ತಪ್ಪು ಹೇಳಿದ್ದರೆ ಹಕ್ಕುಚ್ಯುತಿ ತನ್ನಿ ಎಂದು ಹೇಳಿದರು. ಅಲ್ಲದೆ, ತಾವು ಮಾಡಿದ್ದ ಭಾಷಣದ ಸಿಡಿ ಪ್ರತಿಯನ್ನು ಸ್ಪೀಕರ್ ಮಹಾಜನ್ ಅವರಿಗೆ ಹಸ್ತಾಂತರಿಸಿದರು.

ನಂತರ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಗುಲಾಂ ನಬಿ ಆಜಾದ್ ಅವರು ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಈ ರೀತಿಯ ಹೇಳಿಕೆ ನೀಡಿರುವುದು ತಪ್ಪು. ಮೊದಲು ಆಜಾದ್ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಿಮ್ಮ ಭಾಷಣದ ಮೂಲಕ ಇಸಿಸ್ ಗೆ ನೀವು ಗೌರವವನ್ನು ಸಲ್ಲಿಸಿದ್ದೀರಿ. ಅದನ್ನು ನಿಯಂತ್ರಿಸಬೇಕು. ಇಸಿಸ್ ಉಗ್ರ ಸಂಘಟನೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಹೇಳಿದ್ದರು.

SCROLL FOR NEXT